[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೭

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೭

ಮಹಿಸೂರು ನಗರ ಎಂದು ಹೆಸರಿಟ್ಟಿದ್ದೂ ಯಾರೆಂದು ಗೊತ್ತೆ?

 

ಹಿರಿಯಬೆಟ್ಟದ ಚಾಮರಾಜ ಒಡೆಯರ್ (ಮೂರು):

ಚರಿತ್ರಕಾರರ ಅಭಿಪ್ರಾಯದಂತೆ ಅಧಿಕೃತ ದಾಖಲೆಗಳೊಂದಿಗೆ ವಿವರ ದೊರೆಯುವುದು ಈ ಹಿರಿಯಬೆಟ್ಟದ ಚಾಮರಾಜ ಒಡೆಯರಿಂದಲೇ, ದೊಡ್ಡ ಚಾಮರಾಜ, ಬೆಟ್ಟೆಂದ್ರ, ಬೆಟ್ಟ ರಾಜೇಂದ್ರ, ಬೆಟ್ಟದ ಚಾಮ ಎಂಬುವು ಇವರ ಇತರ ಹೆಸರುಗಳು. ಇವರು 1492 ರಲ್ಲಿ ಜನಿಸಿ, 1513ರಲ್ಲಿ ಸಿಂಹಾಸನಾರೂಢರಾದರು. ಇವರ ಪತ್ನಿ ಕೋಟೆ ತೊರವಳ್ಳಿ ಚನ್ನರಾಜಯ್ಯನವರ ಪುತ್ರಿ ಅಳಗಾಜಮ್ಮಣ್ಣಿ: ಈಕೆಯ ಇನ್ನೊಂದು ಹೆಸರು ಗೋಪರಸಮ್ಮ. ಈಕೆಗೆ ತಿಮ್ಮರಾಜ ಒಡೆಯ, ಕೃಷ್ಣರಾಜ ಒಡೆಯ ಮತ್ತು ಬೋಳ ಚಾಮರಾಜ ಒಡೆಯ ಎಂಬ ಮೂವರು ಗಂಡು ಮಕ್ಕಳು. ದೊಡ್ಡ ದೇವೀರಮ್ಮಣ್ಣಿ, ಚಿಕ್ಕ ದೇವೀರಮ್ಮಣ್ಣಿ ಮತ್ತು ನಂಜಮ್ಮಣ್ಣಿ ಎಂಬ ಮೂವರು ಹೆಣ್ಣು ಮಕ್ಕಳು, ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ನಾಲ್ಕು ದಶಕ ರಾಜ್ಯಭಾರ ಮಾಡಿದರು.

ಬಹುಪಾಲು ಶಾಸನಗಳಲ್ಲಿ ಮೈಸೂರು ಒಡೆಯರ್ ವಂಶಾವಳಿ ಆರಂಭ. ಹಿರಿಯ ಬೆಟ್ಟದ ಚಾಮರಾಜರಿಂದಲೇ ಅರಿನಿಷೂದನರೆಂದು ಇವರನ್ನು ಹೊಗಳಲಾಗಿದೆ. ಇವರಿಗಿಂತ ಹಿಂದೆ ಶಿಥಿಲವಾದ ಕೋಟೆ, ಪುರಗೇರಿ-ತಮ್ಮಟಗೇರಿ, ಚೋಳಕಾಲದ ಸೋಮೇಶ್ವರ-ಲಕ್ಷ್ಮೀನಾರಾಯಣಸ್ವಾಮಿಯ ಗುಡಿಗಳು, ಪುಟ್ಟ ಚೋಳಕೆರೆ ಮಾತ್ರ ಮಹಿಸೂರಾಗಿತ್ತು. ಒಳಸುತ್ತಿನ ಕೋಟೆ ಮುಂತಾದ ಅಗತ್ಯ ರಕ್ಷಣೆ ಮಾಡಿ 1524ರಲ್ಲಿ ಕೋಟೆಯನ್ನು ಕಟ್ಟಿ ಮಹಿಸೂರು ನಗರ ಎಂದು ಹೆಸರನ್ನು ಇಟ್ಟಿದ್ದು ಇವರೇ. ವಿಜಯನಗರ ಕೃಷ್ಣದೇವರಾಯ ಮತ್ತು ಅಚ್ಯುತರಾಯರ ಸಮಕಾಲೀನರಾಗಿದ್ದ ಇವರ ಸೀಮೆ ಮೈಸೂರು ಮತ್ತು ಅದರ ಅಕ್ಕಪಕ್ಕದ ಹಳ್ಳಿಗಳು, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಹಿಂಭಾಗದಲ್ಲಿ ಹಿರೀಕೆರೆಯನ್ನು ಕಟ್ಟಿಸಿದ್ದಲ್ಲದೆ, ಮೇಲುಕೋಟೆ ಚೆಲುವರಾಯಸ್ವಾಮಿಗೆಂದು 1548ರಲ್ಲಿ ತಿಪ್ಪೂರು ಗ್ರಾಮವನ್ನು ಕೊಂಡರು.

ಚಾಮರಾಜರ ಮೂವರ ಮಕ್ಕಳು ಧೀರರು, ಸಮರ್ಥರು ಆದ್ದರಿಂದಲೇ ಇವರ ನಡುವೆ ರಾಜಯ ವಿಭಾಗವಾಯಿತು. ಹೆಮ್ಮಿಗನಹಳ್ಳಿಗೆ ತಿಮ್ಮರಾಜ ಒಡೆಯರ್, ಕೆಂಬಾಳಿಗೆ ಕೃಷ್ಣರಾಜ ಒಡೆಯರ್, ಮೈಸೂರಿಗೆ ಬೋಳ ಚಾಮರಾಜ ಒಡೆಯರ್ ಅಧಿಪತಿಗಳಾದರು. 1553ರಲ್ಲಿ ರಲ್ಲಿ ನಿಧನರಾದರು. ಇವರನ್ನು ತಿರುಮಲಾರ್ಯ ತನ್ನ ಚಿಕದೇವರಾಜ ವಿಜಯದಲ್ಲಿ ಉತ್ತಮ ರಾಜನೆಂದು ಬಣ್ಣಿಸಿದ್ದಾನೆ.

 

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ

Leave a Reply

Your email address will not be published.