[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
ಮದುವೆ ನಿರಾಕರಿಸಿದಕ್ಕೆ  ಮನೆಗೆ ನುಗ್ಗಿ ದಾಂಧಲೆ

ಮದುವೆ ನಿರಾಕರಿಸಿದಕ್ಕೆ ಮನೆಗೆ ನುಗ್ಗಿ ದಾಂಧಲೆ

ಮೈಸೂರು:ಮದುವೆಗೆ ನಿರಾಕರಿಸಿದ ಯುವತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಬನ್ನೂರಿನ ತುರಗನೂರು ಗ್ರಾಮದಲ್ಲಿ ನಡೆದಿದೆ.ಮದುವೆ ನಿರಾಕರಿಸಿದ ಹಿನ್ನಲೆ ಯುವಕ ಹಾಗೂ ಕುಟುಂಬದವರು ಯುವತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮನೆಯಲ್ಲಿದ್ದ ಪದಾರ್ಥಗಳಿಗೆ ಹಾನಿ ಮಾಡಿದ್ದಾರೆ.ತುರಗನೂರು ಗ್ರಾಮದ ಮಲ್ಲಿಕಾರ್ಜುನ ಎಂಬ ಯುವಕನಿಂದ ದಾಂಧಲೆ ನಡೆದಿದೆ.ಅದೇ ಗ್ರಾಮದ ಸುಕನ್ಯಾ (೧೮)ಎಂಬ ಯುವತಿಯನ್ನ ಮದುವೆಯಾಗಲು ಇಚ್ಛಿಸಿ ದ್ದಾನೆ.
ಒಂದು ವರ್ಷದಿಂದ ಸುಕನ್ಯಾಳನ್ನ ತನಗೇ ಕೊಟ್ಟು ಮದುವೆ ಮಾಡಿಕೊಡುವಂತೆ ಒತ್ತಡ ಹೇರುತ್ತಾ ಬಂದಿದ್ದಾನೆ.ಈತನ ಕಿರುಕುಳಕ್ಕೆ ಬೇಸತ್ತ ಸುಕನ್ಯಾ ಮನೆಯವರು ವರನ ಹುಡುಕಾಟ ನಡೆಸಿದ್ದಾರೆ. ಈ ಮಾಹಿತಿ ಅರಿತ ಮಲ್ಲಿಕಾರ್ಜುನ ನಿನ್ನೆ ತನ್ನ ತಂದೆ ಸಿದ್ದಯ್ಯ, ತಾಯಿ ಮಹದೇವಮ್ಮ,ಅಲಕ್ಕಂದಿರಾದ ಭಾರತಿ,ಸುಮಿತ್ರ ಹಾಗು ಭಾವಂದಿರಾದ ಸಿದ್ದರಾಜು ಮತ್ತು ಕುಮಾರ್ ಜೊತೆ ಸೇರಿ ಸುಕನ್ಯಾ ಮನೆಗೆ ನುಗ್ಗಿ ಹಿಗ್ಗಾ ಮುಗ್ಗ ಥಳಿಸಿ ಮನೆಯಲ್ಲಿದ್ದ ಪದಾರ್ಥಗಳಿಗೆ ಹಾನಿ ಮಾಡಿ ಬೆದರಿಕೆ ಹಾಕಿದ್ದಾರೆ.ಹಲ್ಲೆಯಿಂದ ಗಾಯಗೊಂಡ ಸುಕನ್ಯಾಳಿಗೆ ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತಂತೆ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದಂತೆಯೇ ಮಲ್ಲಿಕಾರ್ಜುನ ಪರಾರಿಯಾಗಿದ್ದಾನೆ.ಮಲ್ಲಿಕಾರ್ಜುನ ಮೇಲೆ ಕ್ರಮ ಕೈಗೊಳ್ಳುವಂತೆ ಸುಕನ್ಯಾ ಮನೆಯವರು ಆಗ್ರಹಿಸಿದ್ದಾರೆ.

Leave a Reply

Your email address will not be published.