[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
‘ಭಾರತದಲ್ಲಿ ಆಹಾರ ಭದ್ರತೆ’ ಕುರಿತು  ಸಮ್ಮೇಳನ

‘ಭಾರತದಲ್ಲಿ ಆಹಾರ ಭದ್ರತೆ’ ಕುರಿತು ಸಮ್ಮೇಳನ

ಮೈಸೂರು:ಎಲ್ಲಿಯವರೆಗೆ ಬಡತನ ನಿರ್ಮೂಲನೆ ಮಾಡಲು ಸಾಧ್ಯವಿಲ್ಲವೋ, ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯ ಆಹಾರ ಸಿಗುವುದಿಲ್ಲವೋ ಅಲ್ಲಿಯವರೆಗೆ ಸುಸಜ್ಜಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಒಂದು ನೆಲೆಗಟ್ಟಿನಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯ ಸಾಮಾಜಿಕ ಹೊರಗಿಡುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದ ಐಒಇ ಸೆಮಿನಾರ್ ಹಾಲ್ ನಲ್ಲಿ ‘ಭಾರತದಲ್ಲಿ ಆಹಾರ ಭದ್ರತೆ’ ಕುರಿತು ಹಮ್ಮಿಕೊಳ್ಳಲಾದ ಎರಡು ದಿನದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಆಹಾರ ಸಂರಕ್ಷಣೆ ಎಷ್ಟು ಅಗತ್ಯವಾಗಿದೆ ಎಂದರೆ ಆಹಾರದ್ದೇ ಒಂದು ಸಮಸ್ಯೆಯಾದರೆ, ಆಹಾರ ಸಂರಕ್ಷಣೆ ಇನ್ನೊಂದು ಸಮಸ್ಯೆಯಾಗಿದೆ. ಸಂಸತ್ತು ಆಹಾರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ ದೇಶದ ಪ್ರತಿಯೊಬ್ಬರಿಗೂ ಮೂಲಭೂತವಾಗಿ ಆಹಾರ ದೊರಕಬೇಕು.ಅದರಲ್ಲೂ ವಿಶೇಷವಾಗಿ ಉತ್ತಮವಾದ ಆಹಾರ ಸಿಗಬೇಕು ಎಂದು ಆಹಾರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು. ಆದರೆ ಎಂಥಹ ಆಹಾರ ನಮಗೆ ಬೇಕು,ಅಂಕಿ ಅಂಶಗಳಿಂದ ನೋಡಿದರೆ ಶೇ.60-65 ಭಾಗ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಉತ್ತಮ ಆಹಾರ ಸಿಗದೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ.ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಪಡೆಯಲು ನಮ್ಮಲ್ಲಿ ಸರಿಯಾದ ಕಾನೂನಿನ ಅಗತ್ಯವಿದೆ. 2013ರಲ್ಲಿ ಸಂಸತ್ತು ಆಹಾರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದರೂ ಕೂಡ ಆಹಾರ ವಿತರಣೆ ಯಾವ ರೀತಿ ಆಗುತ್ತಿದೆ ಎಂದು ಅವಲೋಕನ ಮಾಡಿದರೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಒಂದು ಕಡೆ ಆಹಾರದ ಕೊರತೆ, ಇನ್ನೊಂದು ಕಡೆ ಜನಸಂಖ್ಯೆ ಉಲ್ಬಣವಾಗುತ್ತಿದೆ. ಉಲ್ಬಣವಾಗುತ್ತಿರುವ ಜನಸಂಖ್ಯೆಗೆ ಉತ್ತಮ ಆಹಾರ ನೀಡಲು ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಗೂ ಗುಣಮಟ್ಟದ ಆಹಾರ ಪಡೆಯುವ ಹಕ್ಕನ್ನು ನೀಡಲಾಗಿದೆ. ಸರ್ಕಾರ ಕೂಡ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಮಾಜದಲ್ಲಿರತಕ್ಕ ಪ್ರತಿಯೊಬ್ಬ ವ್ಯಕ್ತಿಯೂ ಮನುಷ್ಯನ ಘನತೆಗೆ ತಕ್ಕಂತೆ ಬದುಕುವ ಹಕ್ಕನ್ನು ಅನುಚ್ಛೇದ 21ರಲ್ಲಿ ನೀಡಲಾಗಿದೆ ಎಮದರು. ಆರ್ಥಿಕವಾಗಿ ಹಿಂದುಳಿದವರಿಗೆ, ಕಡುಬಡವರಿಗೆ ಆಹಾರ ಕಾಯ್ದೆ ಲಾಭದಾಯಕವಾಗಿದೆ. ಕಾಯ್ದೆಯ ಮೂಲಕ ಆರ್ಥಿಕವಾಗಿ ಬಳಲುತ್ತಿರುವವವರು ಇದರೊಳಗೆ ಸೇರುವ ಅವಕಾಶ ಲಭಿಸಿದೆ. ಆದರೆ ಆಹಾರ ವಿತರಣೆ ಸಂದರ್ಭ ಯಾರಿಗೆ ತಲುಪಬೇಕಾಗಿತ್ತೋ ಅವರಿಗೆ ತಲುಪುತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ಎಲ್ಲ ಪ್ರಕ್ರಿಯೆಗೆ ನಿಯಂತ್ರಣ ಬೇಕಾಗಿದೆ. ನಿಯಂತ್ರಣವನ್ನು ಕೂಡ ಆಹಾರ ಭದ್ರತೆ ಕಾಯ್ದೆಯಡಿ ನೀಡಲಾಗಿದೆ. ಜನಸಮುದಾಯ ಜಾಗೃತರಾಗಬೇಕು. ಆಹಾರ ಸಮಸ್ಯೆಯನ್ನು ಪರಿಹರಿಸಿದರೆ ಬಹುಪಾಲು ಸಮಸ್ಯೆಯನ್ನು ಈಡೇರಿಸಿದಂತೆ. ಎಲ್ಲಿಯತನಕ ಬಡತನ ನಿರ್ಮೂಲನೆ ಮಾಡಲು ಸಾಧ್ಯವಿಲ್ಲವೋ, ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ ಆಹಾರ ಸಿಗುವುದಿಲ್ಲವೋಅಲ್ಲಿಯವರೆಗೆ ಸುಸಜ್ಜಿತ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಒಂದು ನೆಲೆಗಟ್ಟಿನಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕಿ .ಡಾ.ಬಿ.ಕೆ.ಸುಳಸೀಮಾಲಾ, ಆಹಾರ ಮತ್ತು ನಾಗರಿಕ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಡಾ.ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.