[page_visit_counter_md_total_sites_visit backgroundcolor="#3b5998" countboxcolor="#000000" fontcolor="#FFFFFF" bordercolor="#3b5998"]
Breaking News
ಶಶಿಕುಮಾರ್ ಅವರಿಗೆ ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ  ಅವರಿಂದ ಪದಗ್ರಹಣ

ಶಶಿಕುಮಾರ್ ಅವರಿಗೆ ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರಿಂದ ಪದಗ್ರಹಣ

ಮೈಸೂರು:ರಾಮನಗರ ಜಿಲ್ಲೆ ಕನಕಪುರ ಶ್ರೀ ದೇಗುಲ ಮಠದ ನೂತನ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಶ್ರೀ ಶಶಿಕುಮಾರ್ ಸ್ವಾಮೀಜಿ ಅವರಿಗೆ ಶ್ರೀ ದೇಗುಲ ಮಠದ ಹಿರಿಯ ಶ್ರೀಗಳಾದ ಡಾ.ನಿ.ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಪದಗ್ರಹಣ ಮಾಡಿದರು.

ನಗರದ ಸುತ್ತೂರು ಮಠದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಶಿಕುಮಾರ್ ಅವರಿಗೆ ಪದಗ್ರಹಣ ಮಾಡಲಾಯಿತು.

ಶ್ರೀಮಠದ 13ನೆಯ ಮಠಾಧಿಪತಿಗಳಾಗಿದ್ದ ನಿ.ಪ್ರ.ಸ್ವ.ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮಿಗಳು ಆಕಸ್ಮಿಕವಾಗಿ ಕಿರಿಯ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಶಶಿಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಶಶಿಕುಮಾರ್ ಚಾಮರಾಜನಗರ ಜಿಲ್ಲೆಯ ಕುಲಗಾಣ ಗ್ರಾಮದ ಶರಣದಂಪತಿಗಳಾದ ಎಸ್.ಕೋಮಲಾಂಬ ಹಾಗೂ ಕೆ.ಎಸ್.ಗೌರಿಶಂಕರಸ್ವಾಮಿಯವರ ಪುತ್ರ. ಎಂಬಿಎ ಪದವೀಧರರಾಗಿರುವ ಇದುವರೆಗೆ ಜೆಎಸ್ಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಧ‍್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಬೆಟ್ಟದಪುರ, ವಾಟಾಳು ಶ್ರೀ, ಮರಳೆಗವಿಮಠ ಮೊದಲಾದ ಮಠಗಳ ಪೂಜ್ಯರುಗಳ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು

Leave a Reply

Your email address will not be published.