ಇಮ್ಮಡಿ ರಾಜ ಒಡೆಯರ್-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೬

ಇಮ್ಮಡಿ ರಾಜ ಒಡೆಯರ್-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೬

ಇಮ್ಮಡಿ ರಾಜ ಒಡೆಯರ್

ರಾಜಒಡೆಯರು ತೀರಿಕೊಳ್ಳವಾಗ ಅವರ ಕಿರಿಯ ಪತ್ನಿ ಎಡವನಹಳ್ಳಿ ತಿಮ್ಮಾಜಮ್ಮಣ್ಣಿ ಗರ್ಭಿಣಿ, ಅವರಿಗೆ ಹುಟ್ಟಿದ ಮಗನೇ ಇಮ್ಮಡಿ ರಾಜಒಡೆಯರ್,. ಮೊಮ್ಮಗನಾದ ಚಾಮರಾಜರ ಅನಂತರ ಇಮ್ಮಡಿ ರಾಜಒಡೆಯರರಿಗೆ ಪಟ್ಟಾಭಿಷೇಕವಾಗುಬೇಕೆಂಬುದು ಆ ತಂದೆಯ ಸಹಜವಾದ ಅಪೇಕ್ಷೆಯಾಗಿತ್ತು. ಅದರಂತೆಯೇ, ಸಾಯುವ ಮೂರು ದಿನ ಮೊದಲು ಚಾಮರಾಜರು ಇಮ್ಮಡಿ ರಾಜಒಡೆಯರನ್ನು ಪಟ್ಟಕ್ಕೆ ತಂದರು. ಇಮ್ಮಡಿ ರಾಜಒಡೆಯರ ಹುಟ್ಟಿದ ದಿನಾಂಕ 1617 ಡಿಸೆಂಬರ್ 7 ರಂದು. 1637ರಲ್ಲಿ ಪಟ್ಟಾಭಿಷೇಕವಾಯಿತು.ಕೋಟೆ ಚನ್ನರಾಜಯ್ಯನವರ ಮಗಳು ವೆಂಕಾಟಜಮ್ಮಣ್ಣಿ, ಮದ್ದೂರಿನ ನರಸೇ ಅರಸಿನ ಮಗಳು ನಂಜಮ್ಮಣ್ಣಿಯೊಂದಿಗೆ ಇಮ್ಮಡಿ ರಾಜ ಒಡೆಯರ ವಿವಾಹವನನ್ಉ ಸ್ವತಃ ಚಾಮರಾಜರೇ ನೆರವೇರಿಸಿದರು.

ಇಮ್ಮಡಿ ರಾಜಒಡೆಯರ ಆಳ್ವಿಕೆ ಕಾಲ ಒಂದೂವರೆ ವರ್ಷ ಮಾತ್ರ. ಪಟ್ಟಕ್ಕೆ ಬಂದಾಗ ಇವರ ವಯಸ್ಸು 25. ಇವರ ಕಾಲದಲ್ಲಿ ದಳವಾಯಿ ವಿಕ್ರಮರಾಯ ಅರಕಲಗೂಡನ್ನು ಮುತ್ತಿ, ಕೃಷ್ಣಪ್ಪನಾಯಕನನ್ನು ಸೋಲಿಸಿ ಅಲ್ಲಿನ ಸಂಪತ್ತನ್ನು ಅರಮನೆಯ ಬೊಕ್ಕಸಕ್ಕೆ ಸೇರಿಸಿದ. ಧೈರ್ಯ-ಶೌರ್ಯಗಳಿಂದ ಇಮ್ಮಡಿ ರಾಜ ಒಡೆಯರು ಜನಾನುರಾಗಿಯಾಗಿದ್ದರು. ಅದನ್ನು ತಾಳದೆ ವಿಕ್ರಮರಾಯಿವರನ್ನು ಅರಮನೆಯ ವೈದ್ಯರ ಮೂಲಕ ವಿಷವಿತ್ತು ಕೊಲ್ಲಿಸಿದನು ಎನ್ನುವುದು ಉಂಟು. ಮಲೆಪರಗಂಡ, ಸಂಗೀತಲೋಲ, ಸಾಹಿತ್ಯ ರತ್ನಾಕರ, ಅಭಯ ಪ್ರತಾಪಾಧೀಶ್ವರ ಎಂಬುದು ಇವರ ಬಿರುದುಗಳು. 1638ರಲ್ಲಿ ನಿಧನರಾದರು. ಇವರೊಂದಿಗೆ ಪತ್ನಿಯರು ಸಹಗಮನ ಮಾಡಿದರು.

 

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ….

Leave a Reply

Your email address will not be published.