5 ಗಂಟೆ ನಿರಂತರ ಇಂಟರ್ನೆಟ್ ಬಳಸಿದ್ರೂ ಕಡಿತವಾಗಲ್ಲ ಡೇಟಾ

5 ಗಂಟೆ ನಿರಂತರ ಇಂಟರ್ನೆಟ್ ಬಳಸಿದ್ರೂ ಕಡಿತವಾಗಲ್ಲ ಡೇಟಾ

ದೂರಸಂಪರ್ಕ ಕಂಪನಿಗಳ ಅಗ್ಗದ ಪ್ಲಾನ್ ಗಳ ಘರ್ಷಣೆ ಮುಂದುವರೆದಿದೆ. ಜಿಯೋ, ಏರ್ಟೆಲ್, ಬಿಎಸ್‌ಎನ್‌ಎಲ್, ಅಗ್ಗದ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ. ಈಗ ವೋಡಾಫೋನ್ ಮತ್ತೊಂದು ಅಗ್ಗದ ಪ್ಲಾನ್ ಶುರು ಮಾಡಿದೆ. ವೋಡಾಫೋನ್ ಹೊಸ ಯೋಜನೆ ಬೆಲೆ ಕೇವಲ 33 ರೂಪಾಯಿ. ಇದು ಅನಿಯಮಿತ ಡೇಟಾ ಪ್ಲಾನ್ ಆಗಿದ್ದು, ಸೂಪರ್ ನೈಟ್ ಇಂಟರ್ನೆಟ್ ಪ್ಯಾಕ್ ಎಂದು ಇದನ್ನು ಕರೆಯಲಾಗ್ತಿದೆ.

ವೋಡಾಫೋನ್ ಸೂಪರ್ ನೈಟ್ ಇಂಟರ್ನೆಟ್ ಪ್ಲಾನ್ ನಲ್ಲಿ 33 ರೂಪಾಯಿಗೆ 4ಜಿ ಡೇಟಾ ಸಿಗಲಿದೆ.ಇದ್ರ ಸಿಂಧುತ್ವ ರಾತ್ರಿ 1 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗಿರಲಿದೆ. ಈ ವೇಳೆ ಗ್ರಾಹಕರಿಗೆ ಅನಿಯಮಿತ ಡೇಟಾ ಲಭ್ಯವಾಗಲಿದೆ.

ಇದ್ರ ಜೊತೆಗೆ ಕಂಪನಿ 1 ಗಂಟೆ ಸಿಂಧುತ್ವ ಹೊಂದಿರುವ ಸೂಪರ್ ಅವರ್ ಪ್ಯಾಕ್ ಕೂಡ ಶುರು ಮಾಡಿದೆ. ಇದ್ರಲ್ಲೂ 3ಜಿ ಹಾಗೂ 4ಜಿ ವೇಗದಲ್ಲಿ ಅನಿಯಮಿತ ಡೇಟಾ ಸಿಗಲಿದೆ. ಆಯ್ದ ಬಳಕೆದಾರರಿಗೆ ಮಾತ್ರ ವೋಡಾಫೋನ್ ಈ ಆಫರ್ ನೀಡ್ತಿದೆ. ಮೈ ವೋಡಾಫೋನ್ ವೆಬ್ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ನಂಬರ್ ಚೆಕ್ ಮಾಡಬೇಕು.

Leave a Reply

Your email address will not be published.