“ರಾಜರಥ” ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

“ರಾಜರಥ” ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

ಬೆಂಗಳೂರು: ಇತ್ತೀಚೆಗೆ ರಾಜರಥ ಸಿನಿಮಾದ ವಿವಾದವೊಂದು ಅಂತ್ಯವಾಗಿದೆ. ವಿವಾದಕ್ಕೆ ಸಂಬಂಧಿಸಿದಂತೆ ರಾಜರಥ ಸಿನಿಮಾ ನಿರ್ದೇಶಕ ನಿರೂಪ್ ಭಂಡಾರಿ ಮತ್ತು ನಟ ಅನೂಪ್ ಭಂಡಾರಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

ರ‍್ಯಾಪಿಡ್ ರಶ್ಮಿ ನಡೆಸಿದ ಸಂದರ್ಶನದಲ್ಲಿ ನಿರೂಪ್ ಭಂಡಾರಿ, ತಮ್ಮ `ರಾಜರಥ’ ಸಿನಿಮಾ ನೋಡದೇ ಇರುವರು ಕಚಡಾ ನನ್ಮಕ್ಕಳು ಅಂತಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ರು. ಇದರ ಜೊತೆಗೆ ಅವಂತಿಕಾ ಶೆಟ್ಟಿ ಮತ್ತು ನಿರೂಪ್ ಭಂಡಾರಿ ಸಹ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕಾರ್ಯಕ್ರಮ ನಿರೂಪಕಿ ರ್ಯಾಪಿಡ್ ರಶ್ಮಿ ರಾಜರಥ ಸಿನಿಮಾದ ಬಗ್ಗೆ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಪೂರ್ಣ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ರ‍್ಯಾಪಿಡ್ ರಶ್ಮಿ ಹೇಳಿದ್ದು ಹೀಗೆ

ಎಲ್ಲರಿಗು ನಮಸ್ಕಾರ – ರಾಜರಥ ವಿವಾದದ ಬಗ್ಗೆ ನನ್ನ ಉತ್ತರ ವನ್ನ ಎದುರು ನೋಡ್ತಿರೋರಿಗೆ ನನ್ನ ಆಲೋಚನೆಗಳು ಹೀಗೆ… ಈ ಸಮಯದಲ್ಲಿ ಕೆಲವರು ಏನು ಹೇಳಿದ್ರು ಹೇಳದಿದ್ರೂ ತಪ್ಪನ್ನೇ ಹುಡುಕದೆ natural ಆಗಿದೆ. ನೀವು ಒಬ್ಬ ತಪ್ಪು ಒಪ್ಪುಗಳನ್ನ ಸಮವಾಗಿ ಪರಿಶೀಲಿಸುವ ಪ್ರೇಕ್ಷಕ/ಪ್ರೇಕ್ಷಕಿ ಯಾಗಿ ಓದುವಿರಿ ಅಂತ ಭರವಸೆ ಇದೆ.

ರ‍್ಯಾಪಿಡ್ ರಶ್ಮಿ ಆರ್‍ಜೆ ಆಗಿ, ಈಗ ನಿರೂಪಕಿ, ಗಾಯಕಿ ಮತ್ತು ನಟಿ ಹೀಗೆ ಇಷ್ಟು ವರುಷ ಪ್ರೀತಿ ಕೊಟ್ಟು ನನ್ನ ಬೆಳೆಸಿದ್ದೀರಾ 11 ವರುಷದ ಈ ಕೆರಿಯರ್ ನಲ್ಲಿ ನನ್ನ ಮಾತಿನ ದಾಟಿ, ಹಾಸ್ಯ ಮನೋಭಾವ, ತರಲೆ ಮಾತು, ಬೋಲ್ಡ್ ಆಗಿ ಮಾತಾಡಿದಾಗ ಬೆನ್ನು ತಟ್ಟಿದ್ದೀರಾ.. ಕೆಲವರು ಏನು ಹಿಂಗೇ ಮಾತಾಡ್ತಾರೆ ಅಂತ ಕಣ್ಣು ಬಾಯಿ ಬಿಟ್ಟಿದ್ದೀರಾ.. ಒಬ್ಬರ ಶೈಲಿ ಇಷ್ಟ ಪಡೋದು, ಪಡದೆ ಇರೋದು ಅದಕ್ಕೆ ನೀವು ಸ್ವತಂತ್ರರು. ಪ್ರೇಕ್ಷಕರೇ ಯಾವತ್ತೂ ಬೆಳೆಸೋದು, ಇನ್ನು ಯಾವುದೋ ವಿವಾದ ಆದಾಗ ತಪ್ಪಿದ್ದರೆ ಬೀಳಿಸಿ ಎಚ್ಚರಿಸೋದು. ಈಗ ರಾಜರಥ ಸಂದರ್ಶನ ನಡೆದ ಘಟನೆ ಎಲ್ಲ ತಿರುವನ್ನು ತೆಗೆದುಕೊಂಡು ಕೆಲವರು ನನ್ನ ಕಡೆ ತಿರುಗಿ ಪ್ರಶ್ನೆ ಕೇಳಿ, ಎಡುವಿದ್ದಿಯ, ಪ್ರಚೋದಿಸಿದ್ದೀಯಾ ತಿದ್ಕೋ ಅಂತ ಕೆಲವು ಕಮೆಂಟ್ ಬರೆದಿದ್ದಾರೆ. ಎಲ್ಲವನ್ನು ಗೌರವಿಸಿ ಕೂಲಂಕುಷವಾಗಿ ಎಲ್ಲ ಆಯಾಮ ದಲ್ಲೂ ನೋಡಿ ತಿದ್ದುಕೊಂಡು ಮುಂದೆ ನಡೀತಾ ನಡೆದ ವಿಚಾರದ ಬಗ್ಗೆ ನನಗಿರುವ ಕೆಲವು ವಿಚಾರಗಳು/ ಪ್ರಶ್ನೆ ಹೀಗಿದೆ.

Leave a Reply

Your email address will not be published.