ಪುಟ್ಟ ಅಭಿಮಾನಿಗೆ ಅಪಾರ ಪ್ರೀತಿ ನೀಡಿದ ‘ದಾಸ’

ಪುಟ್ಟ ಅಭಿಮಾನಿಗೆ ಅಪಾರ ಪ್ರೀತಿ ನೀಡಿದ ‘ದಾಸ’

ಸ್ಟಾರ್ ಗಳಿಗೆ ಸಾಕಷ್ಟು ಅಭಿಮಾನಿಗಳಿರುತ್ತಾರೆ. ಕೆಲ ಅಭಿಮಾನಿಗಳು ನೆಚ್ಚಿನ ಕಲಾವಿದರನ್ನ ಹುಡುಕಿಕೊಂಡು ಹೋಗಿ ಭೇಟಿ ಮಾಡಿ ಸಂತತ ವ್ಯಕ್ತ ಪಡಿಸುತ್ತಾರೆ. ಇನ್ನು ಕೆಲವರು ಸಿನಿಮಾ, ಫೋಟೋಗಳನ್ನ ನೋಡಿಕೊಂಡು ಸುಮ್ಮನಾಗುತ್ತಾರೆ. ಆದರೆ ಕೆಲ ಅಭಿಮಾನಿಗಳನ್ನ ಮಾತ್ರ ಸ್ಟಾರ್ ಗಳೇ ಕರೆಸಿಕೊಂಡು ಭೇಟಿ ಮಾಡಿ ಖುಷಿ ಪಡುತ್ತಾರೆ. ಅಂತದ್ದೆ ಸಾಲಿಗೆ ನಿಲ್ಲುವ ಅಭಿಮಾನಿಯೊಬ್ಬರನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿದ್ದಾರೆ. ಯಜಮಾನ ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ದಾಸನನ್ನ ವಿಶೇಷ ಅಭಿಮಾನಿಯೊಬ್ಬರು ಹುಡುಕಿಕೊಂಡು ಸೆಟ್ ಗೆ ಬಂದಿದ್ದಾರೆ. ಪುಟ್ಟ ಅಭಿಮಾನಿಯನ್ನ ಕಂಡ ‘ಡಿ ಬಾಸ್’ ಕೂಡ ಖುಷಿಯಾಗಿದ್ದಾರೆ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಯಜಮಾನ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಶುರುವಾಗಿದ್ದು ಶೂಟಿಂಗ್ ಸಮಯದಲ್ಲಿ ಒಬ್ಬ ಅಭಿಮಾನಿಯನ್ನ ಭೇಟಿ ಮಾಡಿದ್ದಾರೆ. ಆಕೆಯ ಹೆಸರು ಪೂರ್ವಿಕಾ.

11 ವರ್ಷದ ಪೂರ್ವಿಕಾ ಸುಮಾರು 5-6 ವರ್ಷದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ. ಮಂಡ್ಯ ನಿವಾಸಿ ಆಗಿರುವ ಪೂರ್ವಿಕಾ ಸದ್ಯ ಚಿಕಿತ್ಸೆಗಾಗಿ ಚಿಕ್ಕಮಗಳೂರಿನಲ್ಲೇ ಇದ್ದಾರೆ. ದರ್ಶನ್ ಪೂರ್ವಿಕಾ ಹಾಗೂ ಅವರ ತಾಯಿಯನ್ನು ಭೇಟಿ ಮಾಡಿ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ. ಕೆಲಸ ಸಮಯ ಅವರ ಜೊತೆಯಲ್ಲಿದ್ದು ಫೋಟೋ ತೆಗೆಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇಷ್ಟೆಲ್ಲಾ ನೋವು ಅನುಭವಿಸುತ್ತಿರುವ ಅಭಿಮಾನಿಯನ್ನು ನೋಡಿ ಅವರಿಗೆ ಧೈರ್ಯ ಹೇಳಿದ್ದಾರೆ

Leave a Reply

Your email address will not be published.