ಬೈಕ್ ಕಳುವು ಮಾಡುತ್ತಿದ್ದ ಇಬ್ಬರು ಖತರ್ ನಾಕ್ ಬೈಕ್ ಕಳ್ಳರ ಬಂಧನ

ಬೈಕ್ ಕಳುವು ಮಾಡುತ್ತಿದ್ದ ಇಬ್ಬರು ಖತರ್ ನಾಕ್ ಬೈಕ್ ಕಳ್ಳರ ಬಂಧನ

ಮೈಸೂರು:ಮೈಸೂರು ನಗರದ ವಿವಿಧ ಬಡಾವಣೆಗಳು ಜಿಲ್ಲೆಗಳಲ್ಲಿ ಬೈಕ್ ಕಳುವು ಮಾಡುತ್ತಿದ್ದ ಇಬ್ಬರು ಖತರ್ ನಾಕ್ ಬೈಕ್ ಕಳ್ಳರನ್ನು ದೇವರಾಜ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೈಸೂರು ನಿವಾಸಿಗಳಾದ ಶಿವು, ಹೇಮಂತ್ ಎಂದು ಗುರುತಿಸಲಾಗಿದೆ. ಇವರು ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಮತ್ತು ಮೈಸೂರು ಜಿಲ್ಲೆಯಾದ್ಯಂತ ಬೈಕ್ ಗಳನ್ನು ಕದ್ದು, ಕದ್ದ ಬೈಕ್ ಗಳನ್ನು ಬೇರೆ ವ್ಯಕ್ತಿಗಳ ಬಳಿ ಅಡವಿರಿಸಿ ಅವರಿಂದ ಹಣ ಪಡೆದು ಮೋಜು ಮಸ್ತಿ ನಡೆಸುತ್ತಿದ್ದರು ಎನ್ನಲಾಗಿದೆ. ದೇವರಾಜ ಠಾಣೆಯ ಪೊಲೀಸರಿಗೆ ಒಮ್ಮೆ ಅನುಮಾನ ಬಂದು ಇವರನ್ನು ಫಾಲೋ ಮಾಡಿ ತೆರಳಿದಾಗ ಕದ್ದ ಬೈಕ್ ಗಳನ್ನು ಅಡವಿರಿಸಿ ಹಣ ಪಡೆಯುತ್ತಿರುವುದುತಿಳಿದು ಬಂದಿದೆ. ತಕ್ಷಣ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 7ಲಕ್ಷರೂ. ಮೌಲ್ಯದ 12 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ದೇವರಾಜ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಂಜು, ಮಹೇಶ್, ಉಮೇಶ್, ಈಶ್ವರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published.