ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ 134 ಪ್ರಕರಣಗಳು ದಾಖಲು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ 134 ಪ್ರಕರಣಗಳು ದಾಖಲು

ಮೈಸೂರು:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಮಬಂಧಿಸಿದಂತೆ ಒಟ್ಟು 134 ಪ್ರಕರಣಗಳು ದಾಖಲಾಗಿದ್ದು, 97ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. 7.48ಲಕ್ಷರೂ.ನಗದು, ಎರಡು ಬೋರ್ ವೆಲ್ ಲಾರಿ, ಒಂದು ಮೈಕ್ ಸೆಟ್, ನಾಲ್ಕು ವಾಹನ, ಒಂದು ಪ್ರಚಾರ ವಾಹನ, ಒಂದು ಹಾಟ್ ಬಾಕ್ಸ್ ಮತ್ತು ಬಾಟಲಿಗಳು, ಭಿತ್ತಿಪತ್ರ ಮತ್ತು ಕೆ.ಆರ್.ನಗರದಲ್ಲಿ ಟೀಶರ್ಟ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ನಗರದಲ್ಲಿಯೂ ಯಾವುದೇ ಪ್ರಕರಣ ದಾಖಲಾಗಿಲ್ಲ. 386 ರೈಡ್ ಗಳು ನಡೆದಿದ್ದು, 69ಮಂದಿಯನ್ನು ಬಂಧಿಸಲಾಗಿದೆ. 3.09ಲಕ್ಷರೂ.ಮೌಲ್ಯದ 1118ಲೀಟರ್ ಲಿಕ್ಕರ್, ಒಂದು ಕೆ.ಜಿ.ಗೋಲ್ಡ್, 2ಕಾರು, 12 ದ್ವಿಚಕ್ರವಾಹನಗಳು, 1ತ್ರಿಚಕ್ರವಾಹನ ಸೇರಿದಂತೆ 15 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 8.28ಕೋ.ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published.