ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರು ‘ ಕುರಿತ ಸಂಕಿರಣ

ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರು ‘ ಕುರಿತ ಸಂಕಿರಣ

ಮೈಸೂರು:ಮಕ್ಕಳಿಗೆ ಗುಣಮಟ್ಟದ,ಮೌಲ್ಯಯುತ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿಂದು ಮೈಸೂರು ವಿವಿ ಶಿಕ್ಷಣಶಾಸ್ತ್ರ ಅಧ್ಯಯನ ವಿಭಾಗ ಮಾನಸಗಂಗೋತ್ರಿ ಹಾಗೂ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯ ಸ್ಕೋಲ್ ಆಫ್ ಎಜುಕೇಶನ್ ಬೆಂಗಳೂರು ವತಿಯಿಂದ ‘ಶಾಲಾ ಶಿಕ್ಷಣದ ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರು ‘ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಶಿಕ್ಷಣದ ಪ್ರಗತಿ, ಅಭಿವೃದ್ಧಿ ನಡೆಯಲು ಸಾಧ್ಯ. ಕೆಲವರು ಗೋಲ್ಡ್ ಮೆಡಲ್ ಪಡೆದಿರುತ್ತಾರೆ. ಆದರೆ ಉತ್ತಮ ಶಿಕ್ಷಣ ನೀಡುವಲ್ಲಿ ಸಫಲರಾಗುವುದಿಲ್ಲ. ಬೇಸಿಕ್ ನಾಲೆಡ್ಜ್ ಗಳ ಅರಿವಿರುವುದಿಲ್ಲ.ಇಂದು ಸ್ಪರ್ಧಾತ್ಮಕ ಶಿಕ್ಷಣ ನೀಡುವವರ ಅವಶ್ಯಕತೆಯಿದೆ ಎಂದರು. ಇಂದು ಜ್ಞಾನವನ್ನು ಹೆಚ್ಚಿಸುವ ಶಿಕ್ಷಣದ ಅವಶ್ಯಕತೆಯಿದೆ.ಪಠ್ಯಕ್ರಮದಲ್ಲಿರುವಷ್ಟನ್ನೇ ಕಲಿಸಿದರೆ ಸಾಲದು ಮಾನವೀಯ ಮೌಲ್ಯಗಳನ್ನು ತಿಳಿಸುವ, ಸರಿಯಾದ ಮಾರ್ಗದಲ್ಲಿ ನಡೆದ ಗುರಿಸಾಧಿಸುವುದನ್ನು ತಿಳಿಸಬೇಕು. ತಮ್ಮಲ್ಲಿರುವ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸಲು ಸಹಾಯಕವಾಗುವಂಥಹ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಜೀಂ ಜಿ ವಿಶ್ವವಿದ್ಯಾನಿಲಯದ ಸಹನಿರ್ದೇಶಕ ಪ್ರೊ.ರಾಜಶ್ರೀ ಶ್ರೀನಿವಾಸನ್, ಸಿಂಡಿಕೇಟ್ ಸದಸ್ಯರಾದ ಡಾ.ನಿಂಗಮ್ಮ ಸಿ.ಬೆಟ್ಸೂರ್, ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರೊ.ವೈ.ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.