ಜಲ ಜಾಗೃತಿಯ ಕುರಿತು ಆಂದೋಲನ ನಡೆಸಬೇಕಾದ ಅಗತ್ಯವಿದೆ

ಜಲ ಜಾಗೃತಿಯ ಕುರಿತು ಆಂದೋಲನ ನಡೆಸಬೇಕಾದ ಅಗತ್ಯವಿದೆ

ಮೈಸೂರು:ಜನರಲ್ಲಿ ಜಲ ಜಾಗೃತಿಯ ಕುರಿತು ಆಂದೋಲನ ನಡೆಸಬೇಕಾದ ಅಗತ್ಯವಿದೆ ಎಂದು ಕಾವೇರಿ ನೀರಾವರಿ ನಿಯಮ ನಿಗಮಿತದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಶಂಕರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ವಿಜ್ಞಾನ ಭವನದ ಐಒಇಯಲ್ಲಿಂದು ಕಾವೇರಿ ನೀರಾವರಿ ನಿಗಮ ನಿಯಮಿತ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ನಡೆದ ‘ಜಲ ಜಾಗೃತಿ ಜನಾಂದೋಲನ ಕಾರ್ಯಕ್ರಮ’,’ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳಿಗೆ ಒಂದು ದಿನದ ಕಾರ್ಯಾಗಾರ’ವನ್ನು ನೀರು ತುಂಬಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಕಾವೇರಿ ಎಲ್ಲಿಯೂ ತುಂಬಿ ಹರಿದಿರುವುದನ್ನು ಕೇಳಿಲ್ಲ. ಅದಕ್ಕಾಗಿ ಜಲದ ಕುರಿತ ಜಾಗೃತಿ ಈಗಿನಿಂದಲೇ ಆಗಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಯಾವುದೇ ಬೆಳೆಬೆಳೆಯಲು ಸಾಧ್ಯವಿಲ್ಲ. ರೈತರು ಬೆಳೆಬೆಲೆಯಲು ಸಾಲ ಮಾಡುತ್ತಾರೆ. ಬೆಳೆ ಬಾರದಿದ್ದಾಗ ಅವರ ಸ್ಥಿತಿ ದಯನೀಯವಾಗುತ್ತದೆ. ಪಿರಿಯಾಪಟ್ಟಣದಲ್ಲಿ ಒಂದು ದೊಡ್ಡ ಕೆರೆಯಿತ್ತು. ಅದು ಬತ್ತಿರುವುದನ್ನು ನಾನು ಯಾವತ್ತೂ ನೋಡಿರಲೇ ಇಲ್ಲ. ಆದರೆ ಈಗ ಆ ಕೆರೆ ಬತ್ತಿದೆ. ನೀರಿನ ಸದ್ಬಳಕೆಯಾಗದಿದ್ದರೆ ಮುಂದೆ ನೀರಿಗಾಗಿ ಪರಿತಪಿಸಬೇಕಾಗಲಿದೆ. ಅದಕ್ಕಾಗಿ ಚುನಾವಣೆ ಮುಗಿದ ನಂತರ ಜನರಲ್ಲಿ ಜಲದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಎಸ್.ಶ್ರೀಕಂಠಸ್ವಾಮಿ, ಹೇಮಾವತಿ ಯೋಜನಾವಲಯ ಗೊರೂರು ಮುಖ್ಯ ಇಂಜಿನಿಯರ್ ಹೆಚ್.ಎಲ್.ಪ್ರಸನ್ನ, ನೀರಾವರಿ ದಕ್ಷಿಣ ವಲಯ ಮುಖ್ಯ ಇಂಜಿನಿಯರ್ ಎಂ.ಶಿವಕುಮಾರ್, ತುಮಕೂರು ಹೇಮಾವತಿ ನಾಲಾವಲಯದ ಮುಖ್ಯ ಇಂಜಿನಿಯರ್ ಹೆಚ್.ಶಿವಕುಮಾರ್, ಜಲತಜ್ಞ ಯು.ಎನ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.