ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ಸಮೀಕ್ಷೆ

ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ಸಮೀಕ್ಷೆ

ಬೆಂಗಳೂರಿಗೆ ಯಾಕೆ ಅಷ್ಟೊಂದು ಜನರು ವಲಸೆ ಬರುತ್ತಿದ್ದಾರೆ ಎನ್ನುವ ಕುರಿತು ಸಾಕಷ್ಟು ಸಮೀಕ್ಷೆಗಳು ನಡೆಯುತ್ತಲೇ ಇದೆ. ವಿದ್ಯಾಭ್ಯಾಸ, ಕೆಲಸಕ್ಕಾಗಿ ಬರುವವರ ಸಂಖ್ಯೆ ಹೆಚ್ಚು ಆದರೆ ದೇಶದಲ್ಲೇ ಬೆಂಗಳೂರು ಅತಿ ಹೆಚ್ಚು ಸಂಬಲ ನೀಡುವ ನಗರ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಂಡ್ ಸ್ಟಾಡ್ ಇಂಡಿಯಾ ಎಂಬ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ನೌಕರ ವರ್ಗಕ್ಕೆ ಬೆಂಗಳೂರು ನಮ್ಮ ದೇಶದಲ್ಲೇ ಅತಿ ಹೆಚ್ಚು ವೇತನ ಪಾವತಿಸುವ ನಗರ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಂಪನಿಗಳು ಸರಾಸರಿ ಒಬ್ಬ ನೌಕರನಿಗೆ ವರ್ಷವೊಂದಕ್ಕೆ 10.8 ಲಕ್ಷ ರೂ. ವೇತನ ಪಾವತಿಸುತ್ತವೆ.

ಅಂದರೆ, ತಿಂಗಳಿಗೆ 90 ಸಾವಿರ ರೂ. ಸಂಬಳ ನೀಡುತ್ತವೆ. ಇದರಲ್ಲೂ ಅತಿ ಹೆಚ್ಚು ಸಂಬಳವಿರುವುದು ಫಾರ್ಮಾ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಎಂದೂ ಸಮೀಕ್ಷೆ ಹೇಳಿದೆ. ಬೆಂಗಳೂರಿನ ನಂತರ ದೇಶದಲ್ಲಿ ಅತಿ ಹೆಚ್ಚು ಸಂಬಂ ನೀಡುವ ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಪುಣೆ, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಕೊಲ್ಕತ್ತ ಇವೆ. ಇನ್ನು, ಬೆಂಗಳೂರಷ್ಟೇ ಅಲ್ಲ, ದೇಶಾದ್ಯಂತ ಫಾರ್ಮಾ ಹಾಗೂ ಹೆಲ್ತ್ ಕೇರ್ ಕಂಪನಿಗಳು ಸರಾಸರಿ ಒಬ್ಬ ನೌಕರನಿಗೆ ವರ್ಷಕ್ಕೆ 9.6ಲಕ್ಷ ರೂ. ಸಂಬಳ ನೀಡುವುದರೊಂದಿಗೆ ಅತಿ ಹೆಚ್ಚು ಸಂಬಳ ನೀಡುವ ಕಂಪನಿಗಳು ಎನ್ನಿಸಿಕೊಂಡಿವೆ.

ಪ್ರೊಫೆಷನಲ್ ಸೇವೆ ಒದಗಿಸುವ ಕಂಪನಿಗಳು ಎರಡನೇ ಅತಿ ಹೆಚ್ಚು ಸಂಬಳ ಪಾವತಿಸುತ್ತವೆ. ಅಲ್ಲಿ ವರ್ಷಕ್ಕೆ 9.4 ಲಕ್ಷ ರೂ. ಸಂಬಳವಿದೆ. ಮೂರನೇ ಸ್ಥಾನದಲ್ಲಿ ಎಫ್ ಎಂಸಿಜಿ ವರ್ಷಕ್ಕೆ 9.2 ಲಕ್ಷ ಸಂಬಳ ನೀಡುತ್ತಿದೆ. ವೈದ್ಯರು-18.4, ವಾಸ್ತುಶಿಲ್ಪ ತಜ್ಞರು 15.1, ಎಂಜಿನಿಯರ್ ಗಳು 14.8ರಂತೆ ಅತಿ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದಾರೆ.

Leave a Reply

Your email address will not be published.