ಸಿಎಂ ಸಿದ್ದರಾಮಯ್ಯ ಇಂದು ವರುಣಾದಲ್ಲಿ ಪುತ್ರನ ಪರ ಪ್ರಚಾರ

ಸಿಎಂ ಸಿದ್ದರಾಮಯ್ಯ ಇಂದು ವರುಣಾದಲ್ಲಿ ಪುತ್ರನ ಪರ ಪ್ರಚಾರ

ಮೈಸೂರು : ವರುಣಾ ಕ್ಷೇತ್ರದಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣಾ ಅಖಾಡಕ್ಕೆ ಇಳಿದಿದ್ದು, ತಮ್ಮ ಕ್ಷೇತ್ರಗಳ ಜೊತೆಗೆ ಮಕ್ಕಳ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿಎಸ್ ವೈ ಮುಂದಾಗಿದ್ದಾರೆ.

ಇಂದು ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರ ಕೈಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಪುತ್ರನ ಪರ ವರುಣಾದಲ್ಲಿ ಸಿಎಂ ಪ್ರಚಾರ ಮಾಡಲಿದ್ದಾರೆ. ಹಿಂದೆ ಎರಡು ಎರಡು ಬಾರಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಸಿಎಂ ಸಿದ್ದರಾಮಯ್ಯ, ಈ ಬಾರಿ ಪುತ್ರನಿಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ವರುಣಾ ಕ್ಷೇತ್ರದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಣನೂರು, ದಾಸನೂರು, ಕಾರ್ಯ, ತಗಡೂರು, ಮಲ್ಲೂಪುರ, ನಗರ್ಲೆ, ಬೆಳೆಗೆರೆ ಸೇರಿದಂತೆ ಸುಮಾರು 16 ಹಳ್ಳಿಗಳಲ್ಲಿ ಸಿಎಂ ಇಂದು ಪ್ರಚಾರ ನಡೆಸಲಿದ್ದಾರೆ.

Leave a Reply

Your email address will not be published.