ಪುನೀತ್ ರಾಜ್ ಕುಮಾರ್ ಸಿನಿಮಾಗೆ ಹಾಡು ಬರೆಯುವ ಸುವರ್ಣಾವಕಾಶ

ಪುನೀತ್ ರಾಜ್ ಕುಮಾರ್ ಸಿನಿಮಾಗೆ ಹಾಡು ಬರೆಯುವ ಸುವರ್ಣಾವಕಾಶ

ತುಂಬ ಜನ ಯುವ ಸಾಹಿತಿಗಳು ಈಗ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಮ್ಮ ಜೊತೆಗೆ ಇರುವ ಅನೇಕರು ಹಾಡು ಬರೆಯುವ ಹವ್ಯಾಸ ಹೊಂದಿರುತ್ತಾರೆ. ಒಳ್ಳೆ ಒಳ್ಳೆಯ ಸಾಲುಗಳನ್ನು ಬರೆಯುವ ಕೆಲವರಿಗೆ ಒಳ್ಳೆಯ ಅವಕಾಶಗಳು ಮಾತ್ರ ಸಿಕ್ಕಿರುವುದಿಲ್ಲ. ಆದರೆ ಈಗ ಅಂತಹ ಯುವ ಚಿತ್ರಸಾಹಿತಿಗಳಿಗೆ ಒಂದು ಸುವರ್ಣಾವಕಾಶ ಬಂದಿದೆ. ಹೌದು, ಪುನೀತ್ ರಾಜ್ ಕುಮಾರ್ ಸಿನಿಮಾಗೆ ಹಾಡು ಬರೆಯುವ ಅವಕಾಶವನ್ನು ನಿರ್ದೇಶಕ ಪವನ್ ಒಡೆಯರ್ ಮಾಡಿ ಕೊಟ್ಟಿದ್ದಾರೆ. ಪುನೀತ್ ಅಭಿನಯದ ಹೊಸ ಸಿನಿಮಾ ‘ನಟ ಸಾರ್ವಭೌಮ’ ಚಿತ್ರಕ್ಕೆ ಹೊಸ ಸಾಹಿತಿಗಳ ಕೈ ನಲ್ಲಿ ಹಾಡು ಬರೆಸುವ ಪ್ಲಾನ್ ಮಾಡಿರುವ ಚಿತ್ರತಂಡ ಒಂದು ವೇದಿಕೆಯನ್ನು ಸಿದ್ಧ ಮಾಡಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕ ಪವನ್ ಒಡೆಯರ್ ತಮ್ಮ ಫೇಸ್ ಬುಕ್ ಲೈವ್ ಮೂಲಕ ತಿಳಿಸಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪವನ್ ಒಡೆಯರ್ ಫೇಸ್ ಬುಕ್ ಲೈವ್ ಬರಲಿದ್ದು ಆಸಕ್ತರು ಅದನ್ನು ವೀಕ್ಷಿಸಬಹುದಾಗಿದೆ.
 

 

Leave a Reply

Your email address will not be published.