Breaking News
ಚಿನ್ನದ ಅಂಬಾರಿಯಲ್ಲಿ ಚಿನ್ನ ಎಷ್ಟಿದೆ ಗೊತ್ತಾ?

ಚಿನ್ನದ ಅಂಬಾರಿಯಲ್ಲಿ ಚಿನ್ನ ಎಷ್ಟಿದೆ ಗೊತ್ತಾ?

ಮೈಸೂರು ದಸರಾದ ವಿಶೇಷ ಆಕರ್ಷಣೆ ಎಂದರೆ ಜಂಬೂಸವಾರಿ. ಆನೆಯ ಮೇಲೆ ಸಾಗುವ ಅಂಬಾರಿಯನ್ನು ಜಂಬೂಸವಾರಿ ಎಂದು ಕರೆಯಲಾಗುತ್ತದೆ. ಇದನ್ನು ನೋಡಲು ದೇಶವಿದೇಶಗಳಿಂದ ಜನ ಬರುತ್ತಾರೆ. ಜಯಚಾಮರಾಜೇಂದ್ರ ಒಡೆಯರ್ ಅವರು ನಿಧನರಾಗುವುದಕ್ಕೆ ಮೊದಲು ರಾಜರೇ ಅಂಬಾರಿಯ ಒಳಗೆ ಕೂತು ದಸರಾ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಅವರ ನಿಧನಾ ನಂತರ ಚಾಮುಂಡೇಶ್ವರಿ ವಿಗ್ರಹವನ್ನು ಅದರೊಳಗಿಟ್ಟು ಮೆರವಣಿಗೆ ನಡೆಸಲಾಗುತ್ತದೆ.
ವಿಜಯನಗರದ ಅರಸದ ಕಾಲದಿಂದಲೂ ನಡೆದುಕೊಂಡು ಬಂದಿರುವ ದಸರಾ ಸಂಪ್ರದಾಯದಲ್ಲಿ ಅಂಬಾರಿಯ ಕಲ್ಪನೆ ಯಾವಾಗ ಆರಂಭವಾಯಿತು ಎಂಬ ಬಗ್ಗೆ ನಿಧರ್ಿಷ್ಟವಾದ ಮಾಹಿತಿ ಲಭ್ಯವಿಲ್ಲ. ಆದರೆ, ಮೈಸೂರಿನಲ್ಲಿ ಆರಂಭವಾದಾಗಿನಿಂದಲೂ ಅಂಬಾರಿ ಮೆರವಣಿಗೆ ನಡೆದುಕೊಂಡು ಬಂದ ಬಗ್ಗೆ ಉಲ್ಲೇಖವಿದೆ.

ಅಂಬಾರಿ 750 ಕೆಜಿ ತೂಕದ ಇಬ್ಬರು ಕೂತುಕೊಳ್ಳಬಹುದಾದ ಆಕಾರದ ಒಂದು ವಾಹನ ಗೋಪುರ. ಇದರ ಮುಂಭಾಗದಲ್ಲಿ ಸೀಟಿನ ಮಾದರಿಯ ಜಾಗವನ್ನು ನಿಮರ್ಿಸಲಾಗಿದೆ. ಅದರಲ್ಲಿ ಮೆತ್ತನೆಯನ್ನು ಹಾಕಿ ರಾಜರು ಕೂರಲು ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಹಿಂಭಾಗದಲ್ಲಿ ಹಿಂದಕ್ಕೆ ತಿರುಗುವ ಮಾದರಿಯಲ್ಲಿ ಆಸನವನ್ನು ಮಾಡಲಾಗಿದೆ. ಅದರಲ್ಲಿ ರಾಜಪರಿವಾರದವರು ಇಲ್ಲವೇ ದಿವಾನರು ಸಾಗುತ್ತಿದ್ದರು.
750 ಕೆಜಿಯ ಈ ಅಂಬಾರಿಯಲ್ಲಿ ಎಲ್ಲವೂ ಚಿನ್ನವಲ್ಲ. ಮರದಿಂದ ಮಾಡಲಾದ ಅಂಬಾರಿಗೆ ಚಿನ್ನದ ಹೊದಿಕೆಯನ್ನು ಹಾಕಲಾಗಿದೆ. ಸುತ್ತಲೂ ಇರುವ ಕಂಬಗಳು ಹಾಗೂ ಅಲಂಕಾರವನ್ನು ಚಿನ್ನದಿಂದ ಮಾಡಲಾಗಿದೆ. ಇದಕ್ಕೆ 60 ಕೆ.ಜಿ. ಚಿನ್ನವನ್ನು ಬಳಕೆ ಮಾಡಲಾಗಿದೆ. ಸ್ವರ್ಣಕುಲ ನಿಪುಣ ಸಿಂಗಣ್ಣಾಚಾರ್ ಎಂಬವರು ಈ ಚಿನ್ನದ ಹೊದಿಕೆ ಕೆಲಸವನ್ನು ಮಾಡಿದ್ದಾರೆ.

ಅಂಬಾರಿಯ ಮುಖ್ಯ ಭಾಗ ಮಂಟಪದ ರೂಪದಲ್ಲಿರುವ ಒಂದು ಮರದ ರಚನೆ. ಇದು ಸುರುಳಿಯಲಂಕಾರ, ಪರ್ಣ, ಪುಷ್ಪಗಳ ವಿನ್ಯಾಸಗಳಿಂದ ಚಿತ್ರಿಸಲಾಗಿರುವ ಚಿನ್ನದ ಫಲಕಗಳಿಂದ ಆವೃತ್ತವಾಗಿದೆ. ಇವುಗಳನ್ನು ಉಬ್ಬಚಿತ್ರ ತಂತ್ರಜ್ಞಾನದಿಂದ ರೂಪಿಸಲಾಗಿದೆ. ಗೋಪುರಾಗ್ರ ಪಂಚ ಕಳಸಗಳನ್ನು ಪ್ರತಿನಿಧಿಸುತ್ತದೆ. ಇದರ ಮುಂಭಾಗದಲ್ಲಿ ಬ್ಯಾಟರಿ ಚಾಲಿತ ಹಸಿರು, ಕೆಂಪು ದೀಪಗಳಿವೆ. ಮೆರವಣಿಗೆಯಲ್ಲಿ ರಾಜ ಆನೆಯನ್ನು ಮುಂದುವರಿಸಲು ಅಥವಾ ನಿಲ್ಲಿಸಲು ಈ ದೀಪಗಳನ್ನು ಬಳಸುತ್ತಿದ್ದರು.