Breaking News

ಸ್ಕಾಟ್ ಲ್ಯಾಂಡ್ ನಲ್ಲಿ ಈಗಲೂ ಇವೆ ಆಂಗ್ಲೋ – ಮೈಸೂರು ಯುದ್ಧದ ಚಿತ್ರಗಳು!

ಸ್ಕಾಟ್ ಲ್ಯಾಂಡ್ ನಲ್ಲಿ ಈಗಲೂ ಇವೆ ಆಂಗ್ಲೋ – ಮೈಸೂರು ಯುದ್ಧದ ಚಿತ್ರಗಳು!

ಬ್ರಿಟೀಷರನ್ನು ಭಾರತದಿಂದ ಓಡಿಸಲು ಮೈಸೂರು ರಾಜ್ಯವನ್ನು ಅಂದು ಆಳುತ್ತಿದ್ದ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರು ನಾಲ್ಕು ಯುದ್ಧಗಳನ್ನು ಮಾಡಿದರು ಎಂಬುದನ್ನು ಎಲ್ಲರೂ ಓದಿರುತ್ತೀರಿ. ಆದರೆ, ಆ ಯುದ್ಧದ ಚಿತ್ರಗಳನ್ನು ನೋಡಿರಲಾರಿರಿ.

ಏಕೆಂದರೆ ಆಗಿನ್ನೂ ಫೋಟೋ ಅಥವಾ ವಿಡಿಯೋ ಮಾಡುವ ಕ್ಯಾಮರಾ ಇರಲೇ ಇಲ್ಲ. ಹಾಗಾದರೆ ಚಿತ್ರಗಳು ಹೇಗೆ ಬಂದವು ಎಂದಿರಾ!

ಹೌದು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಸಂದರ್ಭವನ್ನು ಅದ್ಭುತವಾಗಿ ಸೆರೆಹಿಡಿಯಲಾದ ಚಿತ್ರಗಳು ಸ್ಕಾಟ್ ಲ್ಯಾಂಡಿನ ಈಡನ್ ಬರ್ಗ್ ನಲ್ಲಿರುವ ರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಇವೆ.  ವಿವರಕ್ಕಾಗಿ ಸ್ವಲ್ಪ ಓದಿ  1707ರಲ್ಲಿ ಸ್ಕಾಟ್ ಲ್ಯಾಂಡ್ ಹಾಗೂ ಇಂಗ್ಲೆಂಡ್ ಏಕೀಕರಣಗೊಂಡವು. 1760ರ ನಂತರ ಆಂಗ್ಲೋ ಮೈಸೂರು ಯುದ್ಧಗಳು ಆರಂಭವಾದವು. ಆ ಸಂದರ್ಭದಲ್ಲಿ ಆಂಗ್ಲೋ ಇಂಡಿಯನ್ ಕಂಪನಿಯ ಪರವಾಗಿ ಸ್ಕಾಟ್ ಲ್ಯಾಂಡಿನ  ಹಲವಾರು ಸೈನಿಕರು, ಕಲಾವಿದರು, ಅಧಿಕಾರಿಗಳು ಭಾರತಕ್ಕೆ ಬಂದವರು. ಭಾರತದಲ್ಲಿ ಕಂಪನಿ ಪರವಾಗಿ ಸೇವೆ ಸಲ್ಲಿಸಲು ಶ್ರೀರಂಗಪಟ್ಟಣವನ್ನು ಸೇರಿದರು.

ಅರ್ಥರ್ ವೆಲ್ಲಿಂಗ್ಟನ್ ನೇತೃತ್ವದಲ್ಲಿ ನಡೆದ ಮೊದಲ ಎರಡು ಯುದ್ಧವನ್ನು ಹೈದರಾಲಿ ಎದುರಿಸಿದ. ಆತನ ಮರಣಾನಂತರ ಯುದ್ಧದ ನೇತೃತ್ವವನ್ನು ವಹಿಸಿಕೊಂಡು ಟಿಪ್ಪು ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿಯೇ ಇದ್ದ. ಆದರೆ 1799ರಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಬ್ರಿಟಿಷ್ ಸೈನಿಕರ ಕೈಯಲ್ಲಿ ಯುದ್ಧಭೂಮಿಯಲ್ಲೇ ಹತನಾದ. ಯುದ್ಧದಲ್ಲಿ ಬ್ರಿಟೀಷರ ಕೈ ಮೇಲಾಯಿತು. ಹಾಗಾಗಿ ಈ ಯುದ್ಧದ ಬಗ್ಗೆ ಸ್ಕಾಟ್ ಲ್ಯಾಂಡ್ ನ ಜನರಿಗೆ ಅಪಾರ ಹೆಮ್ಮೆ. ಸೋತರೂ ಟಿಪ್ಪುವಿನ ವೀರತ್ವದ ಬಗ್ಗೆ ಅವರಿಗೆ ಅಪಾರ ಗೌರವ. ಹಾಗಾಗಿ ಆತನಿಗೆ ಸಂಬಂಧಪಟ್ಟ ಎಲ್ಲ ವಸ್ತುಗಳು, ಚಿತ್ರಗಳನ್ನು ಜೋಪಾನವಾಗಿಟ್ಟಿದ್ದಾರೆ.

ತಮ್ಮ ಶೌರ್ಯವನ್ನೂ, ಟಿಪ್ಪುವಿನ ಪರಾಕ್ರಮವನ್ನು ಬಂದವರು ನೋಡಲಿ ಎಂಬುದು ಅವರ ಉದ್ದೇಶ. ಈಗಲೂ ಸ್ಕಾಟ್ ಲ್ಯಾಂಡ್ ನಲ್ಲಿ ಟಿಪ್ಪು ಜಯಂತಿ ಹಾಗೂ ಮೃತಪಟ್ಟ ದಿನದ ಆಚರಣೆ ನಡೆಯುತ್ತದೆ. ಯುದ್ಧ ಸಂದರ್ಭದಲ್ಲಿದ್ದ ಕೆಲ ಕಲಾವಿದರು ಚಿತ್ರಸಿರುವ ಟಿಪ್ಪುವಿನ ಚಿತ್ರಗಳು ಈಗಲೂ ಮನಸೂರೆಗೊಳ್ಳುತ್ತಿವೆ. ಟಿಪ್ಪುವಿನ ಖಡ್ಗವಂತೂ ಎಂತಹ ವ್ಯಕ್ತಿಯ ಮನಸ್ಸಿನಲ್ಲೂ ರಾಷ್ಟ್ರೀಯತೆಯನ್ನು ಉಕ್ಕಿಸುತ್ತದೆ.

Leave a Reply

Your email address will not be published.