Breaking News

ಯಡಿಯೂರಪ್ಪರವರಿಗೆ ತಿರುಗೇಟು ನೀಡಿದ್ದ. ಎಂ.ಸಿದ್ದರಾಮಯ್ಯರವರು

ಯಡಿಯೂರಪ್ಪರವರಿಗೆ ತಿರುಗೇಟು ನೀಡಿದ್ದ. ಎಂ.ಸಿದ್ದರಾಮಯ್ಯರವರು

ಮೈಸೂರು: ಗಣಿ ಹಗರಣ ಎಸ್ ಐ ಟಿ ತನಿಖೆಗೆ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಸಿ. ಎಂ.ಸಿದ್ದರಾಮಯ್ಯರವರು ಪ್ರತಿಕ್ರಿಯಿಸಿ ತಿರುಗೇಟು ನೀಡಿದ್ದಾರೆ.

ಸುತ್ತೂರಿನ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸುವ ಮೊದಲು ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು  ಎಸ್ .ಐ .ಟಿ ತನಿಖೆ ಹಸ್ತಾಂತರದಲ್ಲಿ ರಾಜಕೀಯ ಉದ್ದೇಶ ಇಲ್ಲಾ.ಆರೋಪ ಹೊತ್ತವರಿಂದ ಇಂತಹ ಮಾತುಗಳು ಸಹಜ ಎಂದು ಯಡಿಯೂರಪ್ಪರವರಿಗೆ ಚಾಟಿ ಬೀಸಿದರು. ಯುಪಿಎ ಸರ್ಕಾರ ಇದ್ದಾಗ ಸಿ. ಬಿ .ಐ ಯನ್ನ ಚೋರ್ ಬಚಾವೂ ಎನ್ನುತಿದ್ದ ಬಿಜೆಪಿಯವರು ಈಗ ಅದೇ ನಾಯಕರಿಗೆ ಸಿ. ಬಿ .ಐ ಮೇಲೆ ದೀಡಿರ್ ವ್ಯಾಮೋಹ ನಂಬಿಕೆ ಎರಡು ಬಂದಿದೆ.
ಸಿ .ಬಿ .ಐ ಕಾನೂನಾತ್ಮಕ ತನಿಖೆ ಮಾಡದ ಕಾರಣ ರಾಜ್ಯ ಸರ್ಕಾರದಿಂದ ಎಸ್ ಐ ಟಿ ತನಿಖೆಗೆ ಆದೇಶಿಸಬೇಕಾಯಿತು.ಇದರಲ್ಲಿ ಯಾವುದೇ ರಾಜಕೀಯ ಹುನ್ನಾರ ಇಲ್ಲ ಎಂದು ತಮ್ಮ ಸರ್ಕಾರದ ನಿರ್ಧಾರವನ್ನ ಸಮರ್ಥಸಿಕೊಂಡರು.ಇದೇ ಸಂದರ್ಭ ಚಿತ್ರನಟ ಕಾಶಿನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಾಶಿನಾಥ್ ಅವರು ಪ್ರತಿಭಾವಂತ ಕಲಾವಿದರು. ಅವರು ವಿಶೇಷವಾಗಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾಶಿನಾಥ ಅವರು ಅಭಿನಯಿಸಿರುವ ಸಿನಿಮಾಗಳನ್ನು ನಾನೂ ನೋಡಿದ್ದೇನೆ. ಅವರು ಚಿಕ್ಕ ವಯಸ್ಸಿನಲ್ಲೇ ನಿಧನರಾಗಿರುವುದು ನೋವು ತರಿಸಿದೆ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ನಷ್ಟವಾಗಿದೆ. ಅವರ ನಿಧನದ ನೋವು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲೆಂದು

ಪ್ರಾರ್ಥಿಸಿದರು.

Leave a Reply

Your email address will not be published.