Breaking News

ಟಿಪ್ಪು ಆಯ್ತು ಈಗ ಬಹಮನಿ ಸುಲ್ತಾನರ ಉತ್ಸವ ಮಾಡ್ತಾರಂತೆ!

ಟಿಪ್ಪು ಆಯ್ತು ಈಗ ಬಹಮನಿ ಸುಲ್ತಾನರ ಉತ್ಸವ ಮಾಡ್ತಾರಂತೆ!

ಮುಸ್ಲಿಮ್ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಬಹಮನಿ ಸುಲ್ತಾನರ ಉತ್ಸವ ಮಾಡಲು ಹೊರಟಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ಖಿಲ್ಲಾ ಮತ್ತು ಹಫ್ತ್‌ ಗುಂಬಜ್‌ನಲ್ಲಿ ಮಾರ್ಚ್‌ 6 ರಂದು ಬಹುಮನಿ ಉತ್ಸವ ಆಚರಣೆಯ ಸಿದ್ಧತೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಗಲಭೆ ಹಬ್ಬಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಟಿಪ್ಪು ಜಯಂತಿ ಆಚರಿಸುವ ಮೂಲಕ ದಕ್ಷಿಣ ಕನ್ನಡ, ಕೊಡಗಿನಲ್ಲಿ ಗಲಭೆ ಎಬ್ಬಿಸಿದ ರಾಜ್ಯ ಸರ್ಕಾರ ಈಗ ಬಹಮನಿ ಸುಲ್ತಾನರ ಉತ್ಸವ ನಡೆಸುವ ಸಿದ್ಧತೆ ನಡೆಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದೆ ಎಂದರು

Leave a Reply

Your email address will not be published.