Breaking News
ಬಜೆಟ್ ಹೈಲೈಟ್ಸ್ : ನೂತನ ಮೂಲಸೌಲಭ್ಯ ನೀತಿ ಜಾರಿ ಭರವಸೆ

ಬಜೆಟ್ ಹೈಲೈಟ್ಸ್ : ನೂತನ ಮೂಲಸೌಲಭ್ಯ ನೀತಿ ಜಾರಿ ಭರವಸೆ

ಬೆಂಗಳೂರು: ಸರಕುಸಾಗಣಿಕೆ ಮತ್ತು ಪ್ರಯಾಣಿಕರ ಸಾರಿಗೆಯನ್ನು ಹೆಚ್ಚು ಸಮರ್ಪಕವಾಗಿ ಮತ್ತು ಶೀಘ್ರವಾಗಿ ರಸ್ತೆ ಸಾಂದ್ರತೆಯನ್ನು ಕಡಿಮೆಗೊಳಿಸಿ ನಿರ್ವಹಿಸಲು ರೋಲ್ ಆನ್ ಮತ್ತು ರೋಲ್ ಆಫ್ ಮಾದರಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಜೆಟ್ ಭಾಷಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 601 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದಾಗಿ ಹೇಳಿರುವ ಅವರು, ಯಾವುದೇ ಹೊಸ ಯೋಜನೆಗಳನ್ನು ಘೋಷಿಸದೆ ಹಳೆಯ ಸಾಧನೆಗಳನ್ನೇ ಹೆಚ್ಚು ವೈಭವೀಕರಿಸಿದ್ದಾರೆ.

ಮಲ್ಟಿಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಹಾಗೂ ಸಮುದ್ರ ವಿಮಾನ ಸೇವೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಕುರಿತು ಕಾರ್ಯಸಾಧತಾ ಅಧ್ಯಯನವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಕೋಲಾರದಲ್ಲಿ 1461 ಕೊಟಿ ರೂ. ವೆಚ್ಚದ ರೈಲ್ವೆ ಕೋಚ್ ಪ್ಯಾಕ್ಟರಿ ಸ್ಥಾಪಿಸಲು 2014ರಲ್ಲಿ ಮಾಡಿಕೊಂಡಿರುವ ಒಪ್ಪಂದಂತೆ ಶೇ.50ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದ್ದು, ಉಚಿತವಾಗಿ ಭೂಮಿಯನ್ನೂ ನೀಡಲಿದೆ. ಈ ವರ್ಷ ಯೋಜನೆಯನ್ನು ಆರಂಭಿಸುವಂತೆ ರೈಲ್ವೆ ಮಂತ್ರಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈಗ ಜಾರಿಯಲ್ಲಿರುವ ಮೂಲಸೌಲಭ್ಯ ನೀತಿಯು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೆ. ಕೈಗಾರಿಕೆ, ಸಾಮಾಜಿಕ ಹಾಗೂ ಆರ್ಥಿಕ ವಲಯಗಳ ಬೆಳವಣಿಗೆಳನ್ನು ಪರಿಗಣಿಸಿ ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳನ್ನು ವಿಶೇಷ ವಾಹಕ ಸಂಸ್ಥೆ ಜಂಟಿ ವಲಯ ಕಂಪೆನಿ ಇತ್ಯಾದಿಗಳ ಮೂಲಕ ಅನುಷ್ಠಾನಗೊಳಿಸುವ ಸಾಧ್ಯತೆಗಳನ್ನು ಅಳವಡಿಸಿ ಹೊಸ ಮೂಲ ಸೌಲಭ್ಯ ನೀತಿಯನ್ನು ರೂಪಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಕಳೆದ ಐದು ವರ್ಷದಲ್ಲಿ ಯಾದಗಿರಿ ರೈಲ್ವೆ ಕೋರ್ಚ್ ಕಾರ್ಖಾನೆ ಪೂರ್ಣಗೊಳಿಸಲಾಗಿದೆ. ಬೆಂಗಳೂರು ಮತ್ತು ಬೀದರ್, ಕಲಬುರ್ಗಿ ರೈಲ್ವೆ ಮಾರ್ಗಗಳನ್ನು ಪೂರ್ಣಗೊಳಿಸಲಾಗಿದೆ. 8ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬೆಳಗಾವಿ, ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣಾ ಕಾಮಗಾರಿ ಪೂರ್ಣಗೊಳಿಸಿ ಕಾರ್ಯ ಆರಂಭಿಸಲಾಗಿದೆ. ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್‍ವೇ ವಿಸ್ತರಣಾ ಕಾಮಗಾರಿ ಪ್ರಗತಿಯಲ್ಲಿದೆ.
ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಕಿರು ವಿಮಾನ ನಿಲ್ದಾಣ ಹಾಗೂ ಕರಾವಾರ, ಕೊಡಗು, ಬಾಗಲಕೋಟೆ, ವಿಜಯಪುರಗಳಲ್ಲಿ ಹೆಲಿಪ್ಯಾಡ್ ಮತ್ತು ಹೆಲಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಅನುಮೋದಿಸಲಾಗಿದೆ.

Leave a Reply

Your email address will not be published.