Breaking News

ಪರಪ್ಪನ ಅಗ್ರಹಾರ ಜೈಲು ಸೇರಿದ ನಲಪಾಡ್ ಮತ್ತು ಗ್ಯಾಂಗ್

ಪರಪ್ಪನ ಅಗ್ರಹಾರ ಜೈಲು ಸೇರಿದ ನಲಪಾಡ್ ಮತ್ತು ಗ್ಯಾಂಗ್

ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿ, ಪೊಲೀಸರ ವಶದಲ್ಲಿದ್ದ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹ್ಮದ್ ಹ್ಯಾರಿಸ್ ನಲಪಾಡ್ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾನೆ. ಮಾರ್ಚ್ 7ರ ವೆರೆಗೆ ನ್ಯಾಯಾಂಗ ಬಂಧನಕ್ಕೆ 8ನೇ ಎಸಿಎಂಎಂ ನ್ಯಾಯಲಯ ಸೂಚಿಸಿದೆ.

ಕಳೆದ ಶನಿವಾರ ಯುಬಿ ಸಿಟಿಯ ಕೆಫೆಯೊಂದರಲ್ಲಿ ಕ್ಷುಲಕ ಕಾರಣಕ್ಕೆ ವಿದ್ವತ್ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ತಲೆ ಮರೆಸಿಕೊಂಡಿದ್ದನು. ಸೋಮುವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಶರಣಾಗಿದನ್ನು, ಎರಡು ದಿನಗಳ ಕಾಲ ಪೊಲೀಸರ ವಶದಲ್ಲಿದ್ದ ನಲಪಾಡ್ ನನ್ನು ಇಂದು ಸಂಜೆ ನ್ಯಾಯಾಲಕ್ಕೆ ಹಾಜರು ಪಡಿಸಿದರು. ಸಾಕ್ಷಿ ನಾಶ ಪಡಿಸುವ ಹಿನ್ನೆಲೆಯಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published.