Breaking News

ದೇವೇಗೌಡರ ಹಂಗಿನಲ್ಲಿ ಬೆಳೆದಿಲ್ಲ – ಸಿದ್ದರಾಮಯ್ಯ

ದೇವೇಗೌಡರ ಹಂಗಿನಲ್ಲಿ ಬೆಳೆದಿಲ್ಲ – ಸಿದ್ದರಾಮಯ್ಯ

ದೇವೇಗೌಡರು ಬೃಹತ್ ಸಮಾವೇಶ ಆಯೋಜಿಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ ನಂತರ ‘ಸಿದ್ದರಾಮಯ್ಯನನ್ನು ರಾಜಕೀಯವಾಗಿ ಬೆಳೆಸಿ ತಪ್ಪು ಮಾಡಿದೆ’ ಎಂದು ಹೇಳಿದ್ದರು. ಇದೀಗ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ. ನನ್ನ ಸ್ವಸಾಮಥ್ರ್ಯದಿಂದ ಬೆಳೆದು ಬಂದಿದ್ದೇನೆ ಎಂದು ಹೇಳಿದ್ದಾರೆ.

ದಿ.ರಾಮಕೃಷ್ಣ ಹೆಗಡೆ ಅವರು ನನ್ನನ್ನು ಮಂತ್ರಿ ಮಾಡಿದರೇ ಹೊರತು ದೇವೇಗೌಡರಲ್ಲ. ಇದಾದ ನಂತರ ರಾಮಕೃಷ್ಣಹೆಗಡೆ ಅವರ ಮತ್ತು ನನ್ನ ನಡುವಿನ ಬಾಂಧವ್ಯ ಕಡಿತವಾದ ನಂತರ ದೇವೇಗೌಡರು ನನ್ನನ್ನು ಕರೆದುಕೊಂಡು ಹೋದರು. ದೇವೇಗೌಡರು ನನ್ನನ್ನು ಬೆಳೆಸಿದರು ಎಂದು ಹೇಳುತ್ತಾರೆ. ಆದರೆ, ನನ್ನನ್ನು ಬೆಳೆಸಿದ್ದು ದೇವೇಗೌಡರಲ್ಲ ರಾಮಕೃಷ್ಣ ಹೆಗಡೆ ಎಂದು ಪ್ರಸ್ತಾಪಿಸಿದ್ದಾರೆ.

Leave a Reply

Your email address will not be published.