Breaking News
‘ಮಾಣಿಕ್ಯ’ ಹಾಡು ವೈರಲ್ ಅದರೂ ” ಹಾಡು ಬರೆದವರ ಜೀವನ ಸ್ಥಿತಿ ನೋಡಿ ” !

‘ಮಾಣಿಕ್ಯ’ ಹಾಡು ವೈರಲ್ ಅದರೂ ” ಹಾಡು ಬರೆದವರ ಜೀವನ ಸ್ಥಿತಿ ನೋಡಿ ” !

‘ಮಾಣಿಕ್ಯ ಮಲರಾಯ ಪೂವಿ…’ ಹಾಡಿಗೆ 40 ವರ್ಷಗಳ ಇತಿಹಾಸವಿದೆ. ಇದನ್ನು ರಚಿಸಿದವರು ಕೇರಳದ ತೃಶೂರಿನ ಪಿ.ಎಂ.ಎ. ಜಬ್ಬಾರ್. ಅವರೀಗ 60ರ ಹರೆಯ. ತನ್ನ 16ರ ಹರೆಯದಲ್ಲಿ ಹಾಡು ಬರೆಯಲು ಪ್ರಾರಂಭಿಸಿದ ಜಬ್ಬಾರ್ ಒಟ್ಟು 500 ಕ್ಕೂ ಅಧಿಕ ಹಾಡುಗಳನ್ನು ರಚಿಸಿದ್ದಾರೆ. ತನ್ನ 20ರ ಹರೆಯದಲ್ಲಿ ‘ಮಾಣಿಕ್ಯ ಮಲರಾಯ ಪೂವಿ…’ ಯನ್ನು ಜಬ್ಬಾರ್ ಬರೆದಿದ್ದರು. 29 ವರ್ಷಗಳ ಹಿಂದೆ ಈದ್ ದಿನದಂದು ದೂರದರ್ಶನದಲ್ಲಿ ಈ ಹಾಡು ಪ್ರಕಟಗೊಂಡಿತ್ತು.

ಹಾಡು ಅಳವಡಿಸಿದ ಸಿನಿಮಾ ಹಾಗೂ ಅದರ ನಟರು ಹಿಟ್ ಆಗಿರಬಹುದು. ಆದರೆ ಹಾಡು ರಚಿಸಿದ ಪಿ.ಎಂ.ಎ. ಜಬ್ಬಾರ್ ಈ ಇಳಿ ವಯಸ್ಸಲ್ಲೂ ಮರಳುನಾಡಲ್ಲಿ ಜೀವನದ ಜಟಕಾ ಬಂಡಿ ಸಾಗಿಸುತ್ತಿದ್ದಾರೆ. ಸುಮಾರು 10 ವರ್ಷ ಖತಾರ್ ನಲ್ಲಿ ಕೆಲಸ ಮಾಡಿ ಇದೀಗ ಕಳೆದ 5 ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ಸಮೀಪದ ಅಲ್-ಮಲಝ್ ಎಂಬಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಾಡು ಸೂಪರ್ ಹಿಟ್ ಆದರೂ ಅದರ ಕರ್ತೃ ಜಬ್ಬಾರ್ ಸೂಪರ್ ಮಾರ್ಕೆಟ್ ನಲ್ಲಿ ದಿನದೂಡುತ್ತಿದ್ದಾರೆ.

 

 

Leave a Reply

Your email address will not be published.