Breaking News

ನಟಿ ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ !

ನಟಿ ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ !

ದುಬೈನಲ್ಲಿ ಹೃದಯಾಘಾತದಿಂದ ಹಠಾತ್ ನಿಧನ ಹೊಂದಿದ ಭಾರತೀಯ ಚಿತ್ರರಂಗದ ಖ್ಯಾತ ಅಭಿನೇತ್ರಿ ಶ್ರೀದೇವಿ ಅವರ ಸಾವಿನ ಸುತ್ತ ಅನುಮಾದ ಹುತ್ತ ಬೆಳೆಯುತ್ತಿದೆ. ಉತ್ತಮ ಆರೋಗ್ಯ ಹೊಂದಿದ್ದ ಶ್ರೀದೇವಿಯವರು ಹಠಾತ್ ಹೃದಯಾಘಾತಕ್ಕೆ ಒಳಗಾಗಿರುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಅನುಮಾನ ಮನೆ ಮಾಡಿದೆ. ಶ್ರೀದೇವಿಯವರಿಗೆ ಹೃದ್ರೋಗ ಸಮಸ್ಯೆಯ ಯಾವುದೇ ಹಿನ್ನೆಲೆ ಇರಲಿಲ್ಲ ಎಂದು ಅವರ ಕುಟುಂಬದ ಮೂಲಗಳು ಹೇಳಿರುವುದು. ನಿನ್ನೆ ರಾತ್ರಿ ದುಬೈನಲ್ಲಿ ಮೃತಪಟ್ಟ ಹಿರಿಯ ನಟಿ ಶ್ರೀದೇವಿ ಮರಣದ ನಂತರ ಯುಎಇಯ ರಾಷ್ಟ್ರೀಯ ಮಾಧ್ಯಮ ಖಲೀಜ್ ಟೈಮ್ಸ್‌ಗೆ ಜತೆ ಮಾತನಾಡಿದ ಶ್ರೀದೇವಿ ಪತಿ ಬೋನಿ ಕಪೂರ್‌ ಕಿರಿಯ ಸಹೋದರ ಸಂಜಯ್ ಕಪೂರ್ ಶ್ರೀದೇವಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಶ್ರೀದೇವಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ. ಶ್ರೀದೇವಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ. ಹೃದಯಾಘಾತದಿಂದ ನಿಧನ ಹೊಂದಿರುವುದು ಕುಟುಂಬದವರೆಲ್ಲರಿಗೂ ಶಾಕ್‌ ಆಗಿದೆ, ಅವರು ಹೋಟೆಲ್‌ ರೂಮಿನಲ್ಲಿದ್ದರು. ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದರು ಎಂಬ ಮಾಹಿತಿ ದೊರೆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಸಂಜಯ್‌ ಕಪೂರ್‌ ತಿಳಿಸಿದ್ದಾರೆ..

Leave a Reply

Your email address will not be published.