Breaking News

ರಾಹುಲ್ ಗಾಂಧಿಯೇ ನನ್ನ ರಾಜಕೀಯ ಗುರು ಸಿದ್ದರಾಮಯ್ಯ ಹೇಳಿದರೂ ಆಶ್ಚರ್ಯವಿಲ್ಲ -HDK

ರಾಹುಲ್ ಗಾಂಧಿಯೇ ನನ್ನ ರಾಜಕೀಯ ಗುರು ಸಿದ್ದರಾಮಯ್ಯ ಹೇಳಿದರೂ ಆಶ್ಚರ್ಯವಿಲ್ಲ -HDK

ಈ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರೆ ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ಬಿಎಸ್ಪಿ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಬೃಹತ್ ಸಮಾವೇಶ ಆಯೋಜಿಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದೆ. ಇದಾದ ನಂತರ ದೇವೇಗೌಡರು ಸಿದ್ದರಾಮಯ್ಯನವರನ್ನು ಟೀಕಿಸಿದಾಗ ಸಿದ್ದರಾಮಯ್ಯನವರು ನನ್ನ ರಾಜಕೀಯ ಗುರು ದೇವೇಗೌಡರಲ್ಲ, ರಾಮಕೃಷ್ಣಹೆಗಡೆಯವರು ಎಂದು ಟಾಂಗ್ ನೀಡಿದ್ದರು. ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಇನ್ನು ಸ್ವಲ್ಪ ದಿನಗಳು ಹೋದ್ರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ನನ್ನ ಗುರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ ಅಚ್ಚರಿಯಿಲ್ಲ, ರಾಮಕೃಷ್ಣ ಹೆಗಡೆ ಅವರು ನನ್ನ ರಾಜಕೀಯ ಗುರು ಅಂತ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು, ಯಾರು ಬೆಳೆಸಿದ್ದು ಯಾರು ಎಂಬುವುದು ಅವರಿಗೆ ಮರೆತು ಹೋಗಿದೆ. ಈಗ ರಾಮಕೃಷ್ಣ ಹೆಗಡೆ ಹೆಸರೇಳಿದ್ದಾರೆ. ಮುಂದೆ ರಾಹುಲ್ ಗಾಂಧಿ ಹೆಸರೇಳುತ್ತಾರೆ’ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published.