Breaking News

ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ” ಪುನೀತ್ “

ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ” ಪುನೀತ್ “

ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಕ್ಲ್ಯಾಪ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಪುನೀತ್ ಹೊಸ ಸಿನಿಮಾ ಸೆಟ್ಟೇರಿದೆ. ಇದಕ್ಕು ಮುಂಚೆ ಪುನೀತ್ ಜೊತೆ ಮೂರು ಹಿಟ್ ಸಿನಿಮಾ ಮಾಡಿರುವ ರಾಕ್ ಲೈನ್ ಈಗ ನಾಲ್ಕನೇ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಪುನೀತ್ ಅಭಿನಯದ ‘ಮೌರ್ಯ’, ‘ಅಜಯ್’ ಹಾಗೂ ‘ಪವರ್’ ಸಿನಿಮಾವನ್ನ ನಿರ್ಮಾಣ ಮಾಡಿದ್ದರು. ಸದ್ಯ ಸೈಲೆಂಟ್ ಆಗಿ ಮುಹೂರ್ತ ಮಾಡಿಕೊಂಡಿರುವ ಚಿತ್ರತಂಡ ಇನ್ನು ನಾಯಕಿಯನ್ನ ಅಂತಿಮ ಮಾಡಿಲ್ಲ. ಇನ್ನುಳಿದಂತೆ ಚಿತ್ರದ ಕಲಾವಿದರನ್ನ ಕೂಡ ಆಯ್ಕೆ ಮಾಡಿಕೊಂಡಿಲ್ಲ. ಮಾರ್ಚ್ 8 ರಿಂದ ಸಿನಿಮಾ ಚಿತ್ರೀಕರಣ ಮಾಡಲಿರುವ ಚಿತ್ರತಂಡ ಅಷ್ಟರೊಳಗೆ ಕಲಾವಿದರನ್ನ ಅಂತಿಮಗೊಳಿಸಲಿದೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿಲ್ಲ. ಇನ್ನು ಈ ಚಿತ್ರವನ್ನ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಪುನೀತ್ ಜೊತೆ ‘ರಣವಿಕ್ರಮ’ ಸಿನಿಮಾ ಮಾಡಿದ್ದರು.

ಇನ್ನು ಪುನೀತ್ ಮತ್ತು ರಾಕ್ ಲೈನ್ ವೆಂಕಟೇಶ್ ಜುಗಲ್ ಬಂದಿಯ ಈ ಚಿತ್ರಕ್ಕೆ ಸೌತ್ ಸೂಪರ್ ಸ್ಟಾರ್ ಸಂಗೀತ ನಿರ್ದೇಶಕ ಡಿ ಇಮ್ಮನ್ ಹಾಡುಗಳನ್ನ ಸಂಯೋಜನೆ ಮಾಡಲಿದ್ದಾರೆ. ಇದಕ್ಕು ಮುಂಚೆ ಕನ್ನಡದಲ್ಲಿ ‘ಕೋಟಿಗೊಬ್ಬ-2’ ಮತ್ತು ಸತೀಶ್ ನೀನಾಸಂ ಅಭಿನಯದ ‘ಅಂಜದಗಂಡು’ ಚಿತ್ರಕ್ಕೆ ಸಂಗೀತ ನೀಡಿದ್ದರು.

Leave a Reply

Your email address will not be published.