Breaking News
” ಶ್ರೀ – ಬೋನಿ ಕಪೂರ್ ” ಲವ್ ಸ್ಟೋರಿ ಹಿಂದೆ ಇರುವ ರೋಚಕ ಕಥೆ

” ಶ್ರೀ – ಬೋನಿ ಕಪೂರ್ ” ಲವ್ ಸ್ಟೋರಿ ಹಿಂದೆ ಇರುವ ರೋಚಕ ಕಥೆ

ಮೂಲಗಳ ಪ್ರಕಾರ ಶ್ರೀದೇವಿ ಮತ್ತು ಬೋನಿ ಕಪೂರ್ ಇಬ್ಬರಿಗೂ ಇದು ಎರಡನೇ ಮದುವೆ. ಪ್ರತ್ಯೇಕವಾಗಿ ಇಬ್ಬರು ಬೇರೆಯವರೊಂದಿಗೆ ಸಹ ಜೀವನ ನಡೆಸಿದ್ದರು. ನಂತರ ಇಬ್ಬರು ಆ ಜೀವನಕ್ಕೆ ಗುಡ್ ಬೈ ಹೇಳಿ ಹೊಸ ಜೀವನಕ್ಕೆ ನಾಂದಿ ಹಾಡಿದ್ದರು. ಶ್ರೀದೇವಿ ಮತ್ತು ಬೋನಿ ಕಪೂರ್ ಹಿಂದೆ ಒಂದು ರೋಚಕ ಲವ್ ಸ್ಟೋರಿ ಇದೆ. ಶ್ರೀದೇವಿಗಾಗಿ ತಮ್ಮ ಮೊದಲ ಹೆಂಡತಿಗೆ ಗುಡ್ ಬೈ ಹೇಳಿದ್ದರು ಬೋನಿ ಕಪೂರ್. ಶ್ರೀದೇವಿ ಬೇರೆಯವರೊಂದಿಗೆ ಜೀವನ ನಡೆಸಿದ್ದರೂ ಸಹ ಆಕೆಗೆ ಆಶ್ರಯ ನೀಡಿ ತನ್ನ ಪ್ರೀತಿಯನ್ನ ಉಳಿಸಿಕೊಂಡಿದ್ದರು. ಶ್ರೀದೇವಿಯ ಜೊತೆ ಆತ್ಮೀಯತೆ ಬೆಳಸಿಕೊಳ್ಳಬೇಕು ಎಂಬ ಕಾರಣಕ್ಕೆ ‘ಮಿಸ್ಟರ್ ಇಂಡಿಯಾ’ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ನಿರೀಕ್ಷೆಯಂತೆ ಶ್ರೀದೇವಿ ಮತ್ತು ಬೋನಿ ಅವರ ನಡುವೆ ಸ್ನೇಹವೂ ಉತ್ತಮವಾಯಿತು. ಬೋನಿ ಕಪೂರ್ ಆಗ ಮದುವೆ ಆಗಿರಲಿಲ್ಲ. ಶ್ರೀದೇವಿಯನ್ನೇ ಪ್ರೀತಿಸಲು ಅರಂಭಿಸಿದ್ದರು. ಆದ್ರೆ, ಶ್ರೀದೇವಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಜೊತೆ ಸೀಕ್ರೆಟ್ ಆಗಿ ಮದುವೆಯಾಗಿಬಿಟ್ಟಿದ್ದರು ಎಂಬ ಸುದ್ದಿ ಹೊರಬಿತ್ತು. ಇದು ಸಹಜವಾಗಿ ಬೋನಿ ಕಪೂರ್ ಗೂ ಆಘಾತ ಉಂಟು ಮಾಡಿತ್ತು. ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿ ಇಬ್ಬರು ಮದುವೆ ಆಗಿದ್ದಾರೆ ಸುದ್ದಿ ಕೇಳಿದ ನಂತರ ಬೋನಿ ಕಪೂರ್ ಬೇರೆ ಮದುವೆಯಾದರು. ಮೋನಾ ಅವರೊಂದಿಗೆ ಸಪ್ತಪದಿ ತುಳಿದ ಬೋನಿ ಕಪೂರ್ 13 ವರ್ಷ ಸಂಸಾರ ಮಾಡಿದರು. ಬೋನಿ-ಮೋನಾ ದಂಪತಿಗೆ ಅರ್ಜುನ್ ಕಪೂರ್ ಮತ್ತು ಅನ್ಷುಲ ಕಪೂರ್ ಇಬ್ಬರು ಮಕ್ಕಳು. ಶ್ರೀದೇವಿಯ ಜೊತೆ ಗೌಪ್ಯವಾಗಿ ಮದುವೆಯಾಗಿದ್ದ ಮಿಥುನ್ ಚಕ್ರವರ್ತಿ ಅದಕ್ಕೂ ಮುಂಚೆಯೇ ನಟಿ ಯೋಗಿತಾ ಬಾಲಿ ಜೊತೆ ವಿವಾಹವಾಗಿದ್ದರು. ನಂತರ ಶ್ರೀದೇವಿ ಜೊತೆಯೂ ಸಂಬಂಧ ಮುಂದವರಿಸಿದ್ದರು. ಈ ಮಧ್ಯೆ ಶ್ರೀದೇವಿಯ ಜೊತೆ ಸಂಬಂಧ ಮುರಿದುಕೊಂಡ ಮಿಥುನ್ ಚಕ್ರವರ್ತಿ ಯೋಗಿತಾ ಬಾಲಿ ಅವರ ಜೊತೆಯಲ್ಲಿಯೇ ಜೀವನ ನಡೆಸಲು ತೀರ್ಮಾನಕ್ಕೆ ಬರುತ್ತಾರೆ.

ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಸ್ನೇಹದ ಸಂಬಂಧ ಪ್ರೀತಿಯ ರೂಪ ಪಡೆಯಿತು. ಇದರ ಪ್ರತಿಫಲವಾಗಿ ಶ್ರೀದೇವಿ ಮದುವೆಗೂ ಮುಂಚೆಯೇ ಗರ್ಭಿಣಿ ಆದರು. ಈ ವಿಷ್ಯ ಬಹಿರಂಗವಾಗುತ್ತಿದ್ದಂತೆ ಬೋನಿ ಕಪೂರ್ ತಮ್ಮ ಮೊದಲ ಪತ್ನಿ ಮೋನಾಗೆ ವಿಚ್ಛೇದನ ನೀಡಿ 1996ರಲ್ಲಿ ಶ್ರೀದೇವಿಯನ್ನ ಮದುವೆ ಆದರು.

Leave a Reply

Your email address will not be published.