Breaking News

ರೈತರನ್ನು ಕೊಂದವರು ‘ರೈತ ಬಂಧು’ ಹೇಗಾಗ್ತರಪ್ಪಾ?

ರೈತರನ್ನು ಕೊಂದವರು ‘ರೈತ ಬಂಧು’ ಹೇಗಾಗ್ತರಪ್ಪಾ?

ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ನಿನ್ನೆ ದಾವಣಗೆರೆಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದೇ ಸಂಧರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ 75ನೇ ಹುಟ್ಟಹಬ್ಬ ಆಚರಿಸಿ, ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಯಡಿಯೂರಪ್ಪನವರಿಗೆ ‘ರೈತರ ಬಂಧು’ ಎಂದು ಬಿರುದು ನೀಡಿದ್ದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಗೋಲಿಬಾರ್ ಮಾಡಿ ರೈತರನ್ನು ಕೊಂದ ದುರಂತ ಇತಿಹಾಸ ಹೊಂದಿರುವ ಯಡಿಯೂರಪ್ಪನವರನ್ನು ‘ರೈತರ ಬಂಧು’ ಎಂದರೆ ಹೇಗೆ? ರೈತರನ್ನು ಕೊಂದವರು ‘ರೈತ ಬಂಧು’ ಹೇಗಾಗ್ತರಪ್ಪಾ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.