Breaking News
ಕಾಂಗ್ರೆಸ್ ಸ್ಕ್ರೀನ್ ಕಮಿಟಿ ರಚನೆ : ಖರ್ಗೆ, ಡಿಕೆಶಿಗೆ ಸ್ಥಾನ ಇಲ್ಲ…!

ಕಾಂಗ್ರೆಸ್ ಸ್ಕ್ರೀನ್ ಕಮಿಟಿ ರಚನೆ : ಖರ್ಗೆ, ಡಿಕೆಶಿಗೆ ಸ್ಥಾನ ಇಲ್ಲ…!

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಲ್ಲಿ ಆರಂಭಗೊಂಡಿರುವ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ರಚಿಸಿರುವ ಉನ್ನತ ಮಟ್ಟದ ಪರಿಶೀಲನಾ (ಸ್ಕ್ರೀನಿಂಗ್)ಸಮಿತಿಯಿಂದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಬಹಳಷ್ಟು ಹಿರಿಯ ಕಾಂಗ್ರೆಸಿಗರನ್ನು ಹೊರಗಿಟ್ಟಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದಂತೆ ಮಧು ಸೂದನ್ ಮಿಸ್ತ್ರಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಪರಿಶೀಲನಾ ಸಮಿತಿಗೆ ಸದಸ್ಯರಾಗಿ ತಮಧ್ವಜ್ ಸಾಹು, ಗೌರವ್ ಗೊಗಾಯ್ ಹಾಗೂ ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‍ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇಮಕಗೊಂಡಿದ್ದಾರೆ.

ಆಕಾಂಕ್ಷಿಗಳ ಪಟ್ಟಿ ಬೃಹದಾಕಾರ ವಾಗಿರುವುದರಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಲಿದ್ದು , ಅದರಲ್ಲಿ ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ, ಸಮರ್ಥವಾಗಿ ಕೆಲಸ ನಿರ್ವಹಿಸು ವವರು ಯಾರು, ಗೆಲ್ಲುವ ಮತ್ತು ಸೋಲುವ ಅಭ್ಯರ್ಥಿಗಳಾರು, ಯಾರಿಗೆ ಅಪರಾಧದ ಹಿನ್ನೆಲೆ ಇದೆ, ಜನರ ನಡುವೆ ಗುರುತಿಸಿಕೊಂಡಿರುವ ನಾಯಕ ಯಾರು, ಪಕ್ಷ ದ್ರೋಹ ಚಟುವಟಿಕೆ ಆರೋಪವಿದೆಯೇ, ಪಕ್ಷದಿಂದ ಇತರೆ ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದಾರೆಯೇ ಎಂಬುದು ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಮಾರ್ಗಸೂಚಿಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಎಲ್ಲಾ ಕ್ಷೇತ್ರಗಳ ಆಕಾಂಕ್ಷಿತ ಅಭ್ಯರ್ಥಿಗಳಿಂದ ಸಲ್ಲಿಕೆಯಾಗುವ ಅರ್ಜಿಗಳು ಮೊದಲು ರಾಜ್ಯದ ಚುನಾವಣಾ ಸಮಿತಿಗೆ ಬರಲಿದ್ದು, ಇಲ್ಲಿ ಪರಿಶೀಲನೆ ನಡೆಸುವ ತಂಡ ಅದನ್ನು 1:5ಕ್ಕಿಳಿಸಿ ರಾಹುಲ್ ಗಾಂಧಿ ನೇತೃತ್ವದ ಪರಿಶೀಲನಾ ಸಮಿತಿಗೆ ರವಾನಿಸಲಿದೆ. ಆ ಪರಿಶೀಲನಾ ಸಮಿತಿಯಲ್ಲಿ ಅಂತಿಮ ಹಂತದ ಆಯ್ಕೆ ನಡೆಸಿ 1:2ಕ್ಕಿಳಿಸಿ ಅಂತಿಮ ಪಟ್ಟಿ ರೂಪಿಸಲಿದೆ.

Leave a Reply

Your email address will not be published.