Breaking News
ಪಕ್ಷದ ಬಾಗಿಲು ಯಾವಾಗಲು ತೆರೆದಿರುತ್ತದೆ ಹೋಗೋರು ಹೋಗಬಹುದು !

ಪಕ್ಷದ ಬಾಗಿಲು ಯಾವಾಗಲು ತೆರೆದಿರುತ್ತದೆ ಹೋಗೋರು ಹೋಗಬಹುದು !

ಜೆಡಿಎಸ್‌ ಪಕ್ಷ ಯಾರೊಬ್ಬರ ಮನೆಯ ಆಸ್ತಿಯಲ್ಲ. ನಮ್ಮ ಪಕ್ಷದ ಬಾಗಿಲು ಸದಾ ತೆರೆದಿದ್ದು, ಒಳಗಿನವರು ಹೊರ ಹೋಗಬಹುದು, ಹೊರಗಿನವರು ಒಳಗೆ ಬರಬಹುದು ಎಂದು ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂಎಲ್‌ಸಿ ಸಂದೇಶ್‌ ನಾಗರಾಜ್‌ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರ್ಸಂಟೇಜ್‌ ನಿಸ್ಸೀಮರು ಪರ್ಸೆಂಟೇಜ್‌ ಬಗ್ಗೆ ಮಾತಾಡುತ್ತಿರುವ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಪರ್ಸೆಂಟೇಜ್‌ನಲ್ಲಿ ನಿಸ್ಸೀಮರಾಗಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ನನ್ನ ಆಡಳಿತದಲ್ಲಿದ್ದ ಪರ್ಸಂಟೇಜ್‌ ಎಷ್ಟು, ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರದಲ್ಲಿ ಎಷ್ಟು ಪರ್ಸಂಟೇಜ್‌ ಇದೆ ಎಂಬುದು ಎಲ್ಲಾ ಗುತ್ತಿಗೆದಾರರಿಗೆ ತಿಳಿದಿದೆ. ಸಚಿವ ರಮೇಶ್‌ಕುಮಾರ್‌ ಸರ್ಕಾರದ ಭ್ರಷ್ಟಾಚಾರವನ್ನು ವಿಧಾನಸಬೆಯಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಸರ್ಕಾರ ಬೇಕಾ? ಪರ್ಸಂಟೇಜ್‌ ರಹಿತ ಸರ್ಕಾರಬೇಕಾ? ಎಂಬುದನ್ನು ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಬಿಜೆಪಿ ಪಾದಯಾತ್ರೆಯ ಬಗ್ಗೆ ಮಾತನಾಡಿ, ಬೆಂಗಳೂರು ನಗರವನ್ನು ಮೊದಲು ಹಾಳುಮಾಡಿದ್ದು ಬಿಜೆಪಿ. ನಂತರ ಅದಕ್ಕೆ ಸಿದ್ದರಾಮಯ್ಯ ಕೊಡುಗೆ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಏನನ್ನು ನೀಡಿಲ್ಲ. ಬೆಂಗಳೂರು, ಮೈಸೂರು ಏನಾದರೂ ಅಭಿವೃದ್ಧಿಯಾಗಿದ್ದರೆ ಅದು ನನ್ನ ಅವಧಿಯಲ್ಲಿ. ಹೀಗಿದ್ದರೂ ರಾಜ್ಯ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಅವರ ಜೇಬು ತುಂಬಿಸಿಕೊಳ್ಳುತ್ತಿದ್ದು, ಮೈಸೂರಿನ ಅಭಿವೃದ್ಧಿಗೂ ಸಿದ್ದರಾಮಯ್ಯ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

 

Leave a Reply

Your email address will not be published.