Breaking News
ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ- ೨

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ- ೨

ಹದಿನಾರಾದ ಹದಿನಾಡು…

 
ಇತಿಹಾಸ : ಸಣ್ಣ ಪಾಳೆಯಪಟ್ಟು ನೋಡಿಕೊಳ್ಳುತ್ತಿದ್ದ ಯದುರಾಯ ಮೈಸೂರು ಪ್ರಾಂತ್ಯವನ್ನು ಬೃಹದಾಕಾರವಾಗಿ ವಿಸ್ತರಿಸಿದ ಎಂಬುದಾಗಿ ಇತಿಹಾಸ ಹೇಳುತ್ತದೆ. ಅಂದಿನ ಕಾಲಕ್ಕೆ ಹದಿನಾಡು, ಯದುನಾಡು ಎಂತಲೂ ಕರೆಯುವುದು ವಾಡಿಕೆಯಾಗಿತ್ತು. ಕ್ರಮೇಣ ಜನರ ಆಡುಭಾಷೆಯಲ್ಲಿ ಹಡಿನಾಡು, ಹದಿನಾರು ಆಗಿ ಬದಲಾವಣೆಯಾಗಿದೆ ಎಂಬುದಾಗಿ ಹೇಳಲಾಗುತ್ತದೆ.
ಹದಿನಾಡು ಪಾಳೆಯಪಟ್ಟು: ಉತ್ತರದಿಂದ ಬಂದ ಯದುರಾಯ ಮತ್ತು ಕೃಷ್ಣರಾಯರು ಮಾರನಾಯ್ಕನನ್ನು ಸೋಲಿಸಿದ ನಂತರ ಯದುರಾಯ  ಕಮಲಾಜಮ್ಮಣ್ಣಿಯನ್ನು ವಿವಾಹವಾದ ನಂತರ ಹದಿನಾಡಿನ ಪಾಳೆಯಪಟ್ಟಿನಲ್ಲಿ ಕೆಲದಿನ ವಾಸವಿದ್ದು, ಬಳಿಕ ಪಕ್ಕದ ಮೈಸೂರಿಗೆ ಬಂದು ಸೇರುತ್ತಾರೆ.
ಯುದುರಾಯರು ಮೈಸೂರಿನ ಚಾಮುಂಡೇಶ್ವರಿ ಅನುಗ್ರಹದಿಂದ ಕಪ್ಪಡಿ ರಾಚಪ್ಪಾಜಿಯ ಆಶೀರ್ವಾದ ಪಡೆದು ಮೈಸೂರು ಪಾಳೆಯಕ್ಕೆ ಪಾಳೆಗಾರರಾಗುತ್ತಾರೆ. ನಿಮ್ಮ ಹೆಸರಿನ ಮುಂದೆ `ಒಡೆಯರ್’ ಎಂದು ಸೇರಿಸಿಕೊಳ್ಳಿ ಎಂದು ರಾಜಪ್ಪಾಜಿ ಆಶೀರ್ವದಿಸುತ್ತಾರೆ. ಅಲ್ಲಿಂದ ಆ ರಾಜ ವಂಶಸ್ಥರ ಹೆಸರಿನ ಮುಂದೆ `ಒಡೆಯರ್’ ಎಂದು ಸೇರಿಸಿಕೊಳ್ಳುವ ಮೂಲಕ ಮೈಸೂರು ಪ್ರಾಂತ್ಯ ದೊಡ್ಡದಾಗುತ್ತಾ ಪ್ರಖ್ಯಾತಿ ಹೊಂದುತ್ತದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಿಂದ `ಹದಿನಾರು’12 ಕಿ.ಮೀ. ದೂರವಿದೆ. ಹದಿನಾರಲ್ಲಿ (ಹಿಂದಿನ ಹದಿನಾಡಲ್ಲಿ) ರಾಜ ಮನೆತನ ಆಳಿದ ಮೂವತ್ತು ಎಕರೆ ವಿಸ್ತೀರ್ಣದಿಂದ ಕೂಡಿದ ಭವ್ಯ ಮನೆ ಇತ್ತು. ಆದರೆ ಕಾಲದ ಹೊಡೆತಕ್ಕೆ ಸಿಕ್ಕಿ ಅದು ಶಿಥಿಲಗೊಂಡು ವಿನಾಶ ಹೊಂದಿದೆ. ಇಲ್ಲಿ ರಾಜ ಮನೆತನದವರು ನಿರ್ಮಿಸಿದ ಚೆನ್ನಿಗರಾಜಸ್ವಾಮಿ ದೇವಾಲಯ, ಚೌಡೇಶ್ವರಿ ದೇವಾಲಯ, ಹೂವಿನ ತೋಟ ಈಗಲೂ ಕಾಣಬಹುದು.
ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ

Leave a Reply

Your email address will not be published.