Breaking News
ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೪

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೪

ಹಿರಿಯ ಬೆಟ್ಟದ ಚಾಮರಾಜ ಒಡೆಯರ್

ಯದುರಾಯರಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಚಾಮುಂಡೇಶ್ವರಿ ದೇವಿಗೆ ಸಂತಾನಕ್ಕಾಗಿ ಅವರು ಹರಸಿಕೊಂಡರು. ಅವರ ಧರ್ಮಪತ್ನಿ ಚಿಕ್ಕ ದೇವಾಜಮ್ಮಣ್ಣಿಗೆ 1409 ಜನವರಿ 22 ರಂದು ಮೊದಲ ಮಗ ಹುಟ್ಟಿದ. ಆತನೇ ಹಿರಿಯ ಬೆಟ್ಟದ ಚಾಮರಾ ಒಡೆಯರ್. ಈ ಪುತ್ರೋತ್ಸವ ಕಾರಣವಾಗಿ ಯದುರಾಯರು ಚಾಮುಂಡೇಶ್ವ ದೇವಸ್ಥಾನದ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿದರು. ಯಾದವಗಿರಿಯಲ್ಲಿ ಕೋಟೆಯನ್ನು ಕಟ್ಟಿಸಿ ನಾಲ್ಕು ದಿಕ್ಕಿಗೆ ಬಾಗಿಲುಗಳನ್ನು ಮಾಡಿಸಿ ಮೇಲುಕೋಟೆ ಎಂದು ಹೆಸರಿಟ್ಟರು.
ಈ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ 1423 ರಿಂದ 1459ರವರೆಗೆ ಆಳ್ವಿಕೆ ಮಾಡಿದರು. ಇವರ ತಮ್ಮನ ಹೆಸರು ಚಾಮಒಡೆಯ. ಈ ಚಾಮೆಒಡೆಯ ಕೆಂಚಲಗೂಡು, ದನಗಳ್ಳಿಯ ಗ್ರಾಮಗಳನ್ನು ಆಳಿಕೊಂಡಿದ್ದ, ಈ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ 36 ವರ್ಷಗಳ ಕಾಲ ಆಳಿದರು. ಇವರ ಪತ್ನಿ ಬೆಟ್ಟದ ಕೋಟೆಯರಸಿನ ಮಗಳ ಗೋಪಾಜಮ್ಮಣ್ಣಿ, ಮಗ ತಿಮ್ಮರಾಜ ಒಡೆಯ. ಇವರು 1459 ಕಾಲೈಕ್ಯರಾದರು.

 

ಮುಂದಿನ ಭಾಗ ನಾಳೆಯ ಸಂಚಿಕೆಯಲ್ಲಿ ….

Leave a Reply

Your email address will not be published.