Breaking News
ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೫

ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೫

ತಿಮ್ಮರಾಜ ಒಡೆಯರ್

ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಮಗ ತಿಮ್ಮರಾಜ ಒಡೆಯರ್. ಇವರು 1433 ಅಕ್ಟೋಬರ್ ನಲ್ಲಿ ಜನಿಸಿದರು. 1459 ರಲ್ಲಿ ಪಟ್ಟಾಭಿಷಕ್ತರಾದರು. 19 ವರ್ಷಗಳ ಕಾಲ ಇವರ ಆಳ್ವಿಕೆ. ಕಳಲೆಯ ಮನೆತನಕ್ಕೆ ಸೇರಿದ ಕಾಂತಜಮ್ಮ ಇವರ ಪತ್ನಿ. ಇವರ ಮಗನೇ ಹಿರಿಯ ಚಾಮರಾಜ ಅರಸ ಒಡೆಯರ್. 1500 ರ ನಂತರ ಕಳಲೆಯ ಅರಸರ ಸಂಬಂಧ ಮೈಸೂರು ಒಡೆಯರಿಗೆ ಆಯಿತೆಂದು ಹೇಳುವ ಚರಿತ್ರಾಕಾರರು ಕಾಂತಾಜಮ್ಮನಿಂದ ಆ ಮನೆತನಗಳ ಸಂಪರ್ಕವಾದುದದರ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಾರೆ. ತಿಮ್ಮರಾಜ ಒಡೆಯರ್ 1478ರಲ್ಲಿ ನಿಧನರಾದರು.

Leave a Reply

Your email address will not be published.