Breaking News
ನಮ್ಮ ನಟರ ಮದುವೆಯ ಫೋಟೋ ನೋಡಿ !

ನಮ್ಮ ನಟರ ಮದುವೆಯ ಫೋಟೋ ನೋಡಿ !

ದರ್ಶನ್-ವಿಜಯಲಕ್ಷ್ಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮದುವೆ ಇಸವಿಯಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದಿತ್ತು. 2000 ಮೇ 19 ರಂದು ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಆಗ ದರ್ಶನ್ ಪೋಷಕ ಕಲಾವಿದನಾಗಿದ್ದರೇ ಹೊರತು ನಾಯಕನಟನಾಗಿರಲಿಲ್ಲ.


 

ಶಿವು – ಗೀತಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಅವರ ಮದುವೆ ಆಗಿದ್ದು 1986 ಮೇ 19. ಖ್ಯಾತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ. ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆ ಆಗಿದ್ದರು. ಶಿವರಾಜ್ ಕುಮಾರ್ ಮದುವೆ ಆದ ವರ್ಷವೇ ಚೊಚ್ಚಲ ಸಿನಿಮಾ ಆನಂದ್ ಬಿಡುಗಡೆಯಾಗಿತ್ತು. ಶಿವಣ್ಣ ಮದುವೆ ಎಂಜಿಆರ್, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಕನ್ನಡ ನಟ-ನಟಿಯರು ಭಾಗಿಯಾಗಿದ್ದರು.


ಸುದೀಪ್- ಪ್ರಿಯಾ


ಸುದೀಪ್ ಮತ್ತು ಪ್ರಿಯಾ ಅವರ ಮದುವೆ ಆಗಿದ್ದು 2000, ಅಕ್ಟೋಬರ್ 18. ಸುದೀಪ್ ಮತ್ತು ಪ್ರಿಯಾ ಅವರು ಪ್ರೀತಿಸಿ ಮದುವೆಯಾಗಿದ್ದರು. ಆ ವೇಳೆ ಸುದೀಪ್ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ‘ಸ್ಪರ್ಶ’ ಬಿಡುಗಡೆಯಾಗಿತ್ತು.


ಉಪ್ಪಿ-ಪ್ರಿಯಾಂಕಾ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ‘ಮಿಸ್ ಕೊಲ್ಕತ್ತಾ’ ಆಗಿದ್ದ ಪ್ರಿಯಾಂಕಾ ಅವರ ವಿವಾಹ ಡಿಸೆಂಬರ್ 14, 2003ರಲ್ಲಿ ನಡೆದಿತ್ತು. ಇಬ್ಬರು ಸಿನಿಮಾ ಕಲಾವಿದರಾಗಿದ್ದ ವೇಳೆಯೇ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದರು.


 

ರಕ್ಷಿತಾ-ಪ್ರೇಮ್

ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಕನ್ನಡದ ಸ್ಟಾರ್ ನಿರ್ದೇಶಕ ಪ್ರೇಮ್ ಅವರ ಮದುವೆ 2007 ರಲ್ಲಿ ನಡೆದಿತ್ತು. ಈ ಮದುವೆಗೆ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಆಗಮಿಸಿ ಆರ್ಶೀವಾದ ಮಾಡಿದ್ದರು.


ಗಣೇಶ್-ಶಿಲ್ಪಾ ಗಣೇಶ್

 

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಅವರು ಮದುವೆ 11 ಫೆಬ್ರವರಿ 2008 ರಂದು ಆಗಿತ್ತು. ‘ಮುಂಗಾರು ಮಳೆ’ ಚಿತ್ರದ ಯಶಸ್ಸಿನ ನಂತರ ಗಣೇಶ್-ಶಿಲ್ಪಾ ಅವರನ್ನ ವರಿಸಿದ್ದರು.


 

ವಿಷ್ಣುವರ್ಧನ್-ಭಾರತಿ

ಡಾ ವಿಷ್ಣುವರ್ಧನ್ ಮತ್ತು ಭಾರತಿ ಅವರ ಮದುವೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಉತ್ತಮ ನೆನಪಾಗಿ ಉಳಿದಿದೆ. 27 ಫೆಬ್ರವರಿ 1975 ರಂದು ಇಬ್ಬರು ಸಪ್ತಪದಿ ತುಳಿದಿದ್ದರು. ಆಗ ತಾನೆ ‘ನಾಗರಹಾವು’ ಚಿತ್ರದ ಮೂಲಕ ಯಶಸ್ಸು ಕಂಡಿದ್ದ ವಿಷ್ಣುವರ್ಧನ್ ಮತ್ತು ಆಗಾಗಲೇ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದ ಭಾರತಿ ಅವರ ವಿವಾಹ ದೊಡ್ಡ ಮಟ್ಟದಲ್ಲಿ ನಡೆದಿತ್ತು.


 

ಅಂಬರೀಷ್-ಸುಮಲತಾ

8 ಡಿಸೆಂಬರ್ 1991 ರಂದು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಮದುವೆ ನೆರವೇರಿತ್ತು. ಇಬ್ಬರು ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯಾಗಿ ಬೆಳೆದಿದ್ದರು. ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದಿದ್ದರು.


 

ಜಗ್ಗೇಶ್-ಪರಿಮಳ

 

ಜಗ್ಗೇಶ್ ಮತ್ತು ಪರಿಮಳ ದಂಪತಿಯ ಲವ್ ಸ್ಟೋರಿ ತುಂಬ ವಿಶೇಷವಾಗಿದೆ. 1984ರ ಮಾರ್ಚ್ ತಿಂಗಳಲ್ಲಿ ಜಗ್ಗೇಶ್ ಅವರು ವಿವಾಹವಾಗಿದ್ದರು.


ಯಶ್-ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರ ವಿವಾಹ 2016ರ ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ವರ್ಷಗಳ ಕಾಲ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.


ಪುನೀತ್- ಅಶ್ವಿನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ಮದುವೆ ಡಿಸೆಂಬರ್ 1, 1999ರಲ್ಲಿ ನಡೆದಿತ್ತು.


ರವಿಚಂದ್ರನ್ -ಸುಮತಿ


ಸೌಂದರ್ಯ – ರಘು

Leave a Reply

Your email address will not be published.