Breaking News

ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಯುಎಸ್- ಬಾಗ್ಲಾ ವಿಮಾನ ಪತನ, 67 ಮಂದಿ ಸಾವು

ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಯುಎಸ್- ಬಾಗ್ಲಾ ವಿಮಾನ ಪತನ, 67 ಮಂದಿ ಸಾವು

ಕಠ್ಮಂಡು: ಬಾಂಗ್ಲಾದೇಶದ ನಾಗರಿಕ ವಿಮಾನವೊಂದು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿರುವ ಘಟನೆ ನಡೆದಿದ್ದು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಸುಮಾರು 67 ಮಂದಿ ಸಾವನ್ನಪ್ಪಿ, ಕೆಲವರು ಮಾತ್ರ ಬದುಕಿಳಿದ್ದಾರೆ ಎಂದು ವರದಿಯಾಗಿದೆ. ಢಾಕದಿಂದಅಮೇರಿಕಾಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ವಿಮಾನ ಕಾಠ್ಮಂಡ್ ಗೆ ಆಗಮಿಸಿ ಲ್ಯಾಂಡಿಗ್ ಆಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನ ಸಂಬಂಧ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿಮಾನ ನಿಲ್ದಾಣ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಅವರಿಸಿದ್ದು ಸ್ಥಳಕ್ಕೆ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ ಅಂತ ತಿಳಿಸಿದ್ದಾರೆ. ಘಟನೆ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Leave a Reply

Your email address will not be published.