Breaking News

ನಲಪಾಡ್ ಗೆ ಇನ್ನೂ 2ದಿನ ಜೈಲೇ ಗತಿ

ನಲಪಾಡ್ ಗೆ ಇನ್ನೂ 2ದಿನ ಜೈಲೇ ಗತಿ

ಬೆಂಗಳೂರು : ಯುಬಿಸಿಟಿಯ ಫರ್ಜಿ ಕಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಪ್ರಕರಣದಲ್ಲಿ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಇಂದು ಕೂಡ ಜಾಮೀನು ದೊರೆತಿಲ್ಲ. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಜಾಮೀನು ಅರ್ಜಿಯನ್ನು ಮಾರ್ಚ್ 14 (ಬುಧವಾರ)ಕ್ಕೆ ಕಾಯ್ದಿರಿಸಿದೆ.

ಫೆ.17ರಂದು ಯುಬಿಸಿಟಿಯ ಫರ್ಜಿ ಕಫೆಯಲ್ಲಿ ಕಾಲು ತಗುಲಿದ ವಿಚಾರಕ್ಕಾಗಿ ವಿದ್ವತ್ ಲೋಕನಾಥನ್ ಅವರ ಪುತ್ರ ವಿದ್ವತ್ ಅವರ ಮೇಲೆ ಮೊಹಮದ್ ಹಾಗೂ ಆತನ ಸಹಚರರು ಮನಬಂದಂತೆ ಹಲ್ಲೆ ನಡೆಸಿದ್ದರು. 36 ಗಂಟೆಗಳ ನಂತರ ನಲಪಾಡ್’ ಪೊಲೀಸರಿಗೆ ಶರಣಾಗಿದ್ದನು. ಅವನನ್ನು ಮಂಡಿಸಿದ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.