Breaking News
ಮಹಾರಾಜರೊಬ್ಬರಿಗೆ ಸಿಡಿಲು ಬಡಿದಿತ್ತು –  ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೯

ಮಹಾರಾಜರೊಬ್ಬರಿಗೆ ಸಿಡಿಲು ಬಡಿದಿತ್ತು – ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೯

ಅರಮನೆ ತ್ರಿಣೇಶ್ವರ ದೇವಾಲಯ ಕಟ್ಟಿಸಿದ್ದು ಯಾರು ಗೊತ್ತೆ?

ಮಹಾರಾಜರೊಬ್ಬರಿಗೆ ಸಿಡಿಲು ಬಡಿದಿತ್ತು ತಿಳಿಯಲು ಮುಂದೆ ಓದಿ…….

ಬೋಳ ಚಾಮರಾಜ ಒಡೆಯರ್ (ನಾಲ್ಕು):

ಹಿರಿಯ ಬೆಟ್ಟದ ಚಾಮರಾಜಒಡೆಯರ್ ಅಪೇಕ್ಷೆಯ ಮೇರೆಗೆತಿಮ್ಮರಾಜರ ಅನಂತರ ಅವರಸೋದರ ಚಾಮರಾಜ ಒಡೆಯರ್ಸಿಂಹಾಸನವನ್ನು ಏರಿದರು.ಚಾಮುಂಡಿಬೆಟ್ಟಕ್ಕೆ ದೇವಿಯ ಸೇವೆಗೆಎಂದು ಬರುತ್ತಿರುವಾಗ ಘೋರವಾದಸಿಡಿಲು ಬಡಿಯಿತು. ಇವರ ತಲೆಯಕೂದಲು ಪೂರ್ತಿ ಉದುರಿತು. ತಾಯಿಚಾಮುಂಡಿಯ ಕೃಪೆಯಿಂದ ದೇಹಕ್ಕೆಸ್ವಲ್ಪವೂ ಊನವಾಗಲಿಲ್ಲ. ಹೀಗಾಗಿ ಇವರಿಗೆ ಬೋಳ ಚಾಮರಾಜ ಒಡೆಯರ್ ಎಂಬ ಹೆಸರು ರೂಢಿಯಾಯಿತು. ಚಾಮನೃಪ, ಚಾಮರಾಜ, ಚಾಮರಾಜೇಂದ್ರ, ಇಮ್ಮಡಿ ಚಾಮರಾಜ ಎಂಬ ಹೆಸರುಗಳನ್ನು ಇವರಿಗೆ ಶಾಸನಗಳಲ್ಲಿ, ಸಾಹಿತ್ಯ ಕೃತಿಗಳಲ್ಲಿ ಬಳಸಿದೆ.

1518 ರ ಏಪ್ರಿಲ್ 17 ಇವರು ಹುಟ್ಟಿದ ದಿನಾಂಕ. 1572 ರಲ್ಲಿ ಪಟ್ಟಾಭಿಷೇಕವಾಯಿತು. ಇವರು ಆಳಿದ್ದು 4 ವರ್ಷ. ಸಿಂಧುವಳ್ಳಿ ರಾಜಯ್ಯನ ಮಗಳು ವೀರಾಜಮ್ಮಣ್ಣಿ, ಕೋಟೆ ತಿಮ್ಮಪ್ಪ ಒಡೆಯನ ಮಗಳು ದೇವಾಜಮ್ಮಣ್ಣಿ ಇವರ ಪತ್ನಿಯರು. ಬೆಟ್ಟದ ಚಾಮರಾಜ ಒಡೆಯ, ರಾಜ ಒಡೆಯ ವೀರಾಜಮ್ಮಣ್ಣಿಯ ಇಬ್ಬರು ಪುತ್ರರು. ಮುಪ್ಪಿನ ದೇವರಾಜ ಒಡೆಯ, ಚನ್ನರಾಜ ಒಡೆಯ ದೇವರಾಜಮ್ಮಣ್ಣಿಯ ಇಬ್ಬರು ಪುತ್ರರು. ದೊಡ್ಡದೇವೀರಮ್ಮಣ್ಣಿ, ಚಿಕ್ಕದೇವಮ್ಮಣ್ಣಿ, ಚಿಕ್ಕದೇವೀರಮ್ಮಣ್ಣಿ ಮೂವರು ಪುತ್ರಿಯರು. ಚಿಕ್ಕದೇವಮ್ಮಣ್ಣಿಯನ್ನು ಕಳಲೆಯ ಮೊದಲನೆಯ ತಿಮ್ಮರಾಜನರಿಗೆ ಕೊಟ್ಟು ಮದುವೆಯಾಗಿತ್ತು.

300 ಭಟರ ವಿಶಿಷ್ಟ ಪಡೆ, 33 ಹಳ್ಳಿಗಳ ಒಡೆತನ ಚಾಮರಾಜರದು. ವಿಜಯನಗರದ ಮೊದಲನೆಯ ತಿರುಮಲರಾಯನ ಮಗ ರಾಮರಾಜಯ್ಯ ಆಗ ಶ್ರೀರಂಗಪಟ್ಟಣದ ಅಧಿಪತಿ. ಅನನಿಲ್ಲದ ಸಮಯದಲ್ಲಿ ಅವನಿಗೆ ವಿಧೇಯರಾಗಿದ್ದ ಕಾರುಗನಹಳ್ಳಿ, ಕನ್ನಂಬಾಡಿ, ತಲಕಾಡು ಮತ್ತು ಅಮ್ಮಚವಾಡಿಗಳ ಪಾಳೆಗಾರರನ್ನು ಸೋಲಿಸಿದರು. ವಿಷಯ ತಿಳದು ತನ್ನನ್ನು ಎದುರಿಸಿದ ರಾಜರಾಮಯ್ಯನನ್ನು ಹೆದರಿಸಿ, ಅವನಿಗೆ ನೆರವಾಗಿ ಬಂದ ತೊರೆಮಾವಿನಹಳ್ಳಿ ವೆಂಕಟನಾದ್ರಿನಾಯಕನ್ನನ್ನು ಪರಾಭವಗೊಳಿಸಿದರು.

ನಾಯಕನ ಬಳಿಯಿದ್ದ ಆನೆ, ಕುದುರೆ, ಅಂದಣ, ಭೇರಿ-ತಮಟೆಗಳನ್ನ ವಶಪಡಿಸಿಕೊಂಡರು. ತನ್ನನ್ನು ನಿರಂತರವಾಗಿ ಯುದ್ದರಂಗದಲ್ಲಿ ಎದುರಿಸಿದವರಿಗೆ ಮೂಗು ಕತ್ತರಿಸಿದರು. ಕಾಲ್ವೆ ಕೊತ್ತೆಗಾಲವನ್ನು ಚಾಮರಾಜನಿಗೆ ಬಿಟ್ಟುವುದುದರ ಮೂಲಕ ರಾಮರಾಜ್ಯ ಯುದ್ದ ನಿಲ್ಲಿಸುವ ಒಪ್ಪಂದ ಮಾಡಿಕೊಂಡ. ದಳವಾಯಿ ಅಗ್ರಹಾರದ ಶಾಸನ, ಗಜ್ಜಿಗನಹಳ್ಳಿ ತಾಮ್ರಪಟಗಳು, ಹಾಲಗೆರೆ ತಾಮ್ರಶಾಸನ, ಚಾಮರಾಜನನ್ನು ಉತ್ತಮ ರಾಜ ಎಂದಿವೆ. ಸುಗುಣಗಂಭೀರ ಇವರಿಗಿದ್ದ ಬಿರುದು.

ಇಂದಿನ ಮೈಸೂರು ಅರಮನೆಯ ಕೋಟೆಯ ಒಳಗಿದ್ದ ಚೋಳಗೆರೆಯನ್ನು ಹರಿಯಬಿಟ್ಟು ತ್ರಿಣೇಶ್ವರ ದೇವಸ್ಥಾನವನ್ನು ನಿರ್ಮಿಸಿ ಅದರ ಪೂಜೆ, ಪುನಸ್ಕಾರಗಳಿಗೆ ವ್ಯವಸ್ಥೆ ಮಾಡಿದರು. 1576 ರ ಜೂನ್ ನಲ್ಲಿ ಮೃತರಾದರು.

Leave a Reply

Your email address will not be published.