Breaking News
ಮೊಹಮ್ಮದ್ ನಲಪಾಡ್ ಗೆ ಜಾಮೀನು ನಿರಾಕರಣೆ

ಮೊಹಮ್ಮದ್ ನಲಪಾಡ್ ಗೆ ಜಾಮೀನು ನಿರಾಕರಣೆ

ಬೆಂಗಳೂರು, ಮಾರ್ಚ್ 14: ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಬಿಡುಗಡೆ ಭಾಗ್ಯವಿಲ್ಲ. ಕರ್ನಾಟಕ ಹೈಕೋರ್ಟ್ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪು ನೀಡಿದ್ದು, ಮೊಹಮ್ಮದ್ ನಲಪಾಡ್ ಅವರ ಜಾಮೀನು ಅರ್ಜಿಯನ್ನು ಏಕಸದಸ್ಯ ಪೀಠವು ಬುಧವಾರದಂದು ತಿರಸ್ಕರಿಸಿದೆ.

ನಲಪಾಡ್ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು. ಇದು ಕೊಲೆ ಯತ್ನದ ಪ್ರಯತ್ನವಲ್ಲ. ಸಾಮಾನ್ಯ ಪ್ರಕರಣ ಎಂದು ವಾದ ಮಂಡಿಸಿದರು. ವಿದ್ವತ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ ಸುಂದರ್ ವಾದ ಮಂಡನೆ ಮಾಡಿದರುಆದರೆ, ಈ ವಾದವನ್ನು ಪುರಸ್ಕರಿಸ ನ್ಯಾ. ಹರೀಶ್ ಕುಮಾರ್ ಅವರಿರುವ ಹೈಕೋರ್ಟಿನ ಏಕಸದಸ್ಯ ಪೀಠ, ಆರೋಪಿಗೆ ಜಾಮೀನು ನಿರಾಕರಿಸಿದೆ.
Vidvat Attack case : Karnataka High court denies bail to Mohammed Nalapad

ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಸೇರಿದಂತೆ 6 ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದಾರೆ. ಮಾರ್ಚ್ 21ರ ತನಕ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಲಾಗಿದೆ. ಫೆ.17ರಂದು ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಎಲ್ಲರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ.

Leave a Reply

Your email address will not be published.