Breaking News
ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ ಸುದೀಪ್

ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಕ್ರಿಕೆಟ್ ಬಿಟ್ಟು ಕಬಡ್ಡಿ ಆಟ ಆಡುವುದಕ್ಕೆ ಶುರು ಮಾಡಿದ್ದಾರೆ. ಇದನ್ನ ನಾವ್ ಹೇಳುತ್ತಿಲ್ಲ ಖುದ್ದು ಸುದೀಪ್ ಅವರೇ ಹೇಳುತ್ತಿದ್ದಾರೆ. ಅಂದರೆ ಸುದೀಪ್ ಕಬಡ್ಡಿ ಆಡುತ್ತಿರುವುದು ಸಿನಿಮಾದಲ್ಲಿ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಸೆಟ್ ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಆಗಿದೆ. ಈಗಾಗಲೇ ಅಂಬರೀಶ್ ಚಿತ್ರೀಕರಣದಲ್ಲಿ ಭಾಗಿ ಆಗಿರುವುದು ಹಳೆ ವಿಚಾರ ಆದರೆ ಸೋಮವಾರದಿಂದ ಸುದೀಪ್ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ನಿರ್ದೇಶಕ ಯಾವ ರೀತಿಯಲ್ಲಿ ಸಿನಿಮಾ ಮಾಡಿರುತ್ತಾನೆ. ಕಿಚ್ಚ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಸೀನ್ ಶೂಟಿಂಗ್ ಶುರುವಾಗಿದ್ದು ಕಿಚ್ಚ ಸುದೀಪ್ ಕಚ್ಚೆ ಹಾಕಿಕೊಂಡು ಕಬಡ್ಡಿ ಅಖಾಡದಿಂದ ಎಂಟ್ರಿ ಪಡೆದುಕೊಳ್ಳಲಿದ್ದಾರೆ. ಸದ್ಯ ಕಿಚ್ಚ ಕಬ್ಬಡ್ಡಿ ಆಡುತ್ತಿರುವ ಪೋಟೋಗಳನ್ನ ಬಿಡುಗಡೆ ಮಾಡಿದೆ ಸಿನಿಮಾತಂಡ. ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಕಿಚ್ಚನ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ. ಸಿನಿಮಾ ಸೆಟ್ ಗೆ ಎಂಟ್ರಿ ಕೊಟ್ಟ ನಂತರ ಸುದೀಪ್ ಈ ಬಗ್ಗೆ ಟ್ವಿಟ್ ಮಾಡಿದ್ದು “ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದೇನೆ. ಮನೆಗೆ ಬಂದಂತೆ ಎನ್ನಿಸುತ್ತಿದೆ. ನನ್ನ ಅಸಿಸ್ಟೆಂಟ್ ಆಗಿದ್ದ ಗುರು ನಿರ್ದೇಶಕನಾಗಿದ್ದಾನೆ. ಅಕ್ಕನ ಮಗ ಸಂಚಿತ್ ಅಸಿಸ್ಟೆಂಟ್ ಡೈರೆಕ್ಟರ್ ತಂಡವನ್ನ ನೋಡಿಕೊಳ್ಳುತ್ತಿದ್ದಾನೆ. ಈ ಸಣ್ಣ ವಯಸ್ಸಿನಲ್ಲೇ ಇಷ್ಟೆಲ್ಲಾ ಜವಾಬ್ದಾರಿ ಕೆಲಸ ಮಾಡುತ್ತಿರುವುದನ್ನ ನೋಡಿದರೆ ಖುಷಿ ಆಗುತ್ತಿದೆ ಎಂದಿದ್ದಾರೆ ಸುದೀಪ್ .

Leave a Reply

Your email address will not be published.