Breaking News
ಚಾಮರಾಜ ಒಡೆಯರ್(6) – ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೫

ಚಾಮರಾಜ ಒಡೆಯರ್(6) – ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೫

ಚಾಮರಾಜ ಒಡೆಯರರು ಸರ್ವಧರ್ಮ ಸಮನ್ವಯ ಪ್ರತಿಪಾದಕರು. ಸ್ವತಃ ವೈಷ್ಣವರಾದರೂ ಶೈವ ಮತ್ತು ಜೈನಧರ್ಮಗಳನ್ನು ಪ್ರೋತ್ಸಾಹಿಸಿದರು. ಅವರ ದಳವಾಯಿ ವಿಕ್ರಮರಾಯ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹೊರ ಪ್ರಾಕಾರದಲ್ಲಿ ಬಸವನನ್ನು, ಕಪಿಲಾತೀರದಲ್ಲಿ ಉತ್ಸವಮಂಟಪವನ್ನು ನಿರ್ಮಿಸಿದರು. ಚಾಮರಾಜರು ಶ್ರವಣಬೆಳಗೊಳಕ್ಕೆ ಭೇಟಿಯಿತ್ತಿದ್ದರಲ್ಲದೇ, ಜಗದೇವರಾಯನ ಭೀತಿಯಿಂದ ಆ ಕ್ಷೇತ್ರವನ್ನು ತೊರೆದುಹೋಗಿದ್ದ ಚಾರುಕೀರ್ತಿ ಪಂಡಿತರನ್ನು ಮತ್ತೆ ಬರಮಾಡಿಕೊಂಡರು. ನಾಗಮಂಗಲದ ಬಾಚಹಳ್ಳಿಯಲ್ಲಿ ಚಾಮರಾಜಸಮುದ್ರವೆಂಬ ಅಗ್ರಹಾರ, ಮೇಲುಕೋಟೆಯ ಪುಷ್ಕರಿಣಿಗೆ ಪತ್ನಿಯ ಹೆಸರಲ್ಲಿ ಮುದ್ದಾಜಮ್ಮಣ್ಣಿ ಸೋಪಾನ ನಿರ್ಮಿಸಿದರು. ಅವರ ಆಸ್ಥಾನದಲ್ಲಿ ರಾಮಚಂದ್ರ ಹಾಗೂ ಪದ್ಮಣ ಪಂಡಿತರು ಅಶ್ವಶಾಸ್ತ್ರ ಕೃತಿಗಳನ್ನೂ, ಸ್ವತಃ ಚಾಮರಾಜರೇ ಬ್ರಹ್ಮೋತ್ತರ ಖಂಡಕ್ಕೆ ಟೀಕೆಯನ್ನೂ, ಚಾಮರಾಜೋಕ್ತಿ ವಿಲಾಸ ಎಂಬ ಹೆಸರಲ್ಲಿ ವಾಲ್ಮೀಕಿ ರಾಮಾಯಣದ ಗದ್ಯಾವತರಣವನ್ನು ರಚಿಸಿದ್ದಾರೆ. ಬೌದ್ಧಿಕ ಚರ್ಚೆ, ಸಾಹಿತ್ಯ ಸಂಗೀತ ಗೋಷ್ಠಿ, ವಾದ-ಪ್ರತಿವಾದಗಳ ಮಂಡನೆಯಿಂದ ಅವರ ಅಸ್ಥಾನ ತುಂಬಿಹೋಗಿತ್ತು.

ಇದು ರಾಮಮಂದಿರ…

ಮೈಸೂರಿನಲ್ಲಿ ನೂರಾರು ವರ್ಷಗಳ ಹಿಂದೆಯೇ ರಾಮಮಂದಿರಗಳು ನಿರ್ಮಿತವಾಗಿವೆ. ವಿಶೇಷವೆಂದರೆ 18ನೇ ಶತಮಾನದಿಂದಲೂ ರಾಮಮಂದಿರಗಳು ಆಯಾಯ ಜಾತಿಯ ಹೆಸರಿನಲ್ಲಿ ನಿರ್ಮಿತವಾಗಿವೆ. ಒಕ್ಕಲುಗೇರಿ ರಾಮಮಂದಿರ, ಕುರುಹಿನಶೆಟ್ಟಿ ರಾಮಮಂದಿರ, ಕುರುಬರ ರಾಮಮಂದಿರ ಇತ್ಯಾದಿ. ಅಲ್ಲದೆ ಮೈಸೂರಿನ ಹೃದಯಭಾಗವಾದ ಶಿವರಾಮಪೇಟೆ, ದೊಡ್ಡಪೇಟೆ, ವಿವಿ ಮೊಹಲ್ಲ, ಸರಸ್ವತಿಪುರಂ, ಕೃಷ್ಣಮೂರ್ತಿಪುರಂ ಮುಂತಾದ ಹಳೇ ಬಡಾವಣೆಗಳಲ್ಲಿ ರಾಮಮಂದಿರ ಸ್ಥಾಪಿಸಲಾಗಿದ್ದು,ರಾಮನವಮಿ ಸಂದರ್ಭದಲ್ಲಿ ಸಂಗೀತೋತ್ಸವಗಳನ್ನು ನಡೆಸೆಕೊಂಡು ಬರಲಾಗುತ್ತಿತ್ತು. ಮೈಸೂರಿನ ಹತ್ತಾರು ಗರಡಿಗಳಲ್ಲಿ ರಾಮಮಂದಿರ ಎಂದರೆ ರಾಮನ ಚಿತ್ರಪಟ್ಟವನ್ನಿಟ್ಟು ಪೂಜಿಸುವ ಪದ್ಧತಿ ಇಂದಿಗೂ ಇದೆ.

ಅಂತಹ ಪ್ರಮುಖ ರಾಮಮಂದಿರಗಳ ಮಾಹಿತಿ ತಿಳಿದಿಕೊಳ್ಳೋಣ….

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ….

Leave a Reply

Your email address will not be published.