Breaking News
ರಣಧೀರ ಕಂಠೀರವ ನರಸರಾಜ ಒಡೆಯರ್(1)-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೭

ರಣಧೀರ ಕಂಠೀರವ ನರಸರಾಜ ಒಡೆಯರ್(1)-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೭

ರಣಧೀರ ಕಂಠೀರವ ನರಸರಾಜ ಒಡೆಯರ್-1

ಹನ್ನೆರಡನೆಯ ಆಳ್ವಿಕೆ

ಇಮ್ಮಡಿ ರಾಜಒಡೆಯರು ಪುತ್ರ ಸಂತಾನವಿಲ್ಲದೆ ತೀರಿಕೊಂಡರು. ರಾಜಒಡೆಯರ ನೇರ ಸಂತತಿ ಇರಲಿಲ್ಲ. ರಾಜಒಡೆಯರ ತಮ್ಮಂದಿರು ಬೆಟ್ಟದ ಚಾಮರಾಜ ಹಾಗೂ ಮುಪ್ಪಿನ ದೇವರಾಜ. ಇವರಿಬ್ಬರಿಗೂ ಸಾಕಷ್ಟು ವಯಸ್ಸಾಗಿತ್ತು. ಬೆಟ್ಟದ ಚಾಮರಾಜರ ಮೊದಲ ಮಗ ತಿಮ್ಮರಾಜ ಅವರ ಕಣ್ಣಮುಂದೆಯೇ ತೀರಿಹೋಗಿದ್ದ. ಆದ್ದರಿಂದ ಎರಡನೆಯ ಮಗನಾದ ಕಂಠೀರವ ನರಸರಾಜರನ್ನು ಕರೆಸಿ ಎರಡವನಹಳ್ಳಿ ತಿಮ್ಮಾಜಮ್ಮ (ರಾಜಒಡೆಯರ ಕಿರಿಯ ಪತ್ನಿ) ಪಟ್ಟ ಕಟ್ಟಿದರು. ರಣಧೀರ ಕಂಠೀರವರವರ ತಾಯಿ ಪುರದ ದೇವಾಜಮ್ಮಣ್ಣಿ, 1615 ಮೇ 2 ರಂದು ಜನಿಸಿದರು.

ಇವರಿಗೆ 1638ರಲ್ಲಿ ಪಟ್ಟಾಭಿಷೇಕವಾಯಿತು. ಬಾಲ್ಯದಲ್ಲಿ ಇವರನ್ನು ಸೋದರಮಾವಂದಿರು ನಂಜೇಂದ್ರ, ಲಿಂಗೇಂದ್ರ ಜತೆ ಬೆಳೆಸಿದರು. ಅಂಗಸಾಧನೆ, ಅಸ್ತ್ರ-ಶಸ್ತ್ರ ಪ್ರಯೋಗ, ಆನೆ ಕುದರೆಗಳ ಬಳಕೆ ಚಾಲನೆಗಳಲ್ಲಿ ಇವರು ನಿಪುರಾದರು. ಪಟ್ಟಾಭಿಷಿಕ್ತರಾದ ಕೆಲವೇ ತಿಂಗಳಲ್ಲಿ ದಳವಾಯಿ ವಿಕ್ರಮರಾಯನ ವಿಷಪ್ರಾಶನ ತಂತ್ರ, ಇಮ್ಮಡಿ ರಾಜಒಡೆಯರ ಅಕಾಲ ಮರಣ ಅರಿತು ವಿಚಾರಣೆ ನಡೆಸಿದರು.ಸತ್ಯ ಸಂಗತಿ ಗೊತ್ತಾಗಿ ವಿಕ್ರಮರಾಯನನ್ನು, ಆ ಕೃತ್ಯದಲ್ಲಿ ಭಾಗಿಯಾದವರನ್ನು ಮರಣಶಿಕ್ಷೆಗೆ ಗುರಿಪಡಿಸಿದರು. ತಿಮ್ಮಪ್ಪನಾಯಕನನ್ನು ದಳವಾಯಿಯಾಗಿ ನೇಮಿಸಿದರು.

 

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ….

Leave a Reply

Your email address will not be published.