Breaking News
ನಟ ಗಣೇಶ್ ಗೆ 75 ಲಕ್ಷ ರೂ. ಪರಿಹಾರ ನೀಡಲು ಆದೇಶ

ನಟ ಗಣೇಶ್ ಗೆ 75 ಲಕ್ಷ ರೂ. ಪರಿಹಾರ ನೀಡಲು ಆದೇಶ

ಅನುಮತಿಯಿಲ್ಲದೇ ಅಗರಬತ್ತಿ ಪ್ರಚಾರದ ಜಾಹೀರಾತಿಗೆ ತಮ್ಮ ಭಾವಚಿತ್ರ ಬಳಸಿಕೊಂಡಿದ್ದ ಕಂಪನಿ ವಿರುದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ಗಣೇಶ್ ಅವರಿಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

ಮೋಕ್ಷ್ ಅಗರಬತ್ತಿ ಕಂಪನಿ, ಗಣೇಶ್ ಅವರ ಭಾವಚಿತ್ರವನ್ನು ಬಳಸಿಕೊಂಡಿದ್ದು, ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲವೆನ್ನಲಾಗಿದೆ. ಈ ಹಿನ್ನಲೆಯಲ್ಲಿ 75 ಲಕ್ಷ ರೂ. ಪರಿಹಾರ ಕೋರಿ ಗಣೇಶ್, ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಇಂದು ತೀರ್ಪು ಹೊರ ಬಿದ್ದಿದ್ದು, ಕಂಪನಿ, ಗಣೇಶ್ ಅವರಿಗೆ 75 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಲಾಗಿದೆ.

Leave a Reply

Your email address will not be published.