Breaking News
ಕರಿಘಟ್ಟ ದೇವಾಲಯ ಜೀರ್ಣೋದ್ಧಾರ ಮಾಡಿದ್ದು ಯಾರು ಗೊತ್ತೆ?-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೮

ಕರಿಘಟ್ಟ ದೇವಾಲಯ ಜೀರ್ಣೋದ್ಧಾರ ಮಾಡಿದ್ದು ಯಾರು ಗೊತ್ತೆ?-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೮

ರಣಧೀರ ಕಂಠೀರವ ನರಸರಾಜ ಒಡೆಯರು-1

ಕಂಠೀರವರ ಕಾಲದ ಸ್ಥಳೀಯ ಆಡಳಿತ ನೆಮ್ಮದಿಯಿಂದಿತ್ತು. ರಾಜ್ಯಾಡಳಿತಕ್ಕೆ ಮಂತ್ರಿ, ಲೆಕ್ಕಿಗ, ರಾಯಸದವ, ಪಟ್ಟಣದ ಅಧಿಕಾರಿ, ದಳವಾಯಿ ಎಂಬ ವಿವಿಧ ಅಧಿಕಾರಿಗಳಿದ್ದರು. ಆ ಕಾಲದಲ್ಲಿ ಗಡಿರಕ್ಷಣೆ ತುಂಬ ಮುಖ್ಯವಾಗಿತ್ತು. ಪ್ರತಿಯೊಂದು ಗಡಿಗೂ ಒಬ್ಬ ಸುಬೇದಾರ, ಇಬ್ಬರು ಕರಣಿಕರು, ಗುಮಾಸ್ತರು, ಠಾಣೆದಾರರನ್ನು ಕಂಠೀರವರು ನೇಮಿಸಿದ್ದರು. ರಾಜ್ಯವು ಪದೇ ಪದೆ ಆಕ್ರತುಮಣಕ್ಕೆ ಒಳಗಾಗುತ್ತಿತ್ತು. ಶ್ರೀರಂಗಪಟ್ಟಣ ಕೋಟೆ, ಕೊತ್ತಲ, ಅಗಳು ವಿಸ್ತಾರವಾದವು. ದೊಡ್ಡ ಉಗ್ರಾಣಗಳು ಸಿದ್ದವಾದವು. ಮದ್ದಿನ ಮನೆ, ಜಾನಸಾಲೆ, ಆಯುಧಶಾಲೆ ಬಂದವು.ಮೈಸೂರು ಕೋಟೆ ವಿಶಾಲವಾಯಿತು. ಅರಮನೆ ಸುಂದರವಾಯಿತು. ಅಲಗಿನ ಚಾವತಡಿಯಲ್ಲಿ ಆಯುಧ ಶೇಖರವಾಯಿತು. ಮದ್ದಿನ ಮನೆ ಸಿದ್ದವಾಯಿತು. ಇಂತ ರಕ್ಷಣಾತ್ಮಕ ವ್ಯವಸ್ಥೆಯಿಂದ ಶ್ರೀರಂಗಪಟ್ಟಣ ಮೈಸೂರು ಉಳಿಯಿತು.

ಶ್ರೀರಂಗಪಟ್ಟಣದಲ್ಲಿ ಒಂದು ಟಂಕಸಾಲೆಯನ್ನು ಆರಂಭಿಸಿ ಕಂಠೀರಾಯ ಹಣ, ಕಂಠೀರವ ವರಹ ಮತ್ತು ಆನೆಕಾಸುಗಳನ್ನು ನರಸರಾಜರು ಚಾಲ್ತಿಗೆ ತಂದರು. ಇದರಿಂದ ಅವರ ಸಾರ್ವಭೌಮತ್ವ ಮತ್ತು ನಾಣ್ಯ ಚಲಾವಣೆಯಲ್ಲಿ ಏಕರೂಪತೆ ಸಾಧ್ಯವಾಯಿತು. ದರ್ಬಾರಿನ ಬಿಗಿ ಕಟ್ಟಳೆ ಏರ್ಪಡಿಸಿದರು. ನರಸಿಂಹಸ್ವಾಮಿ ದೇವಸ್ಥಾನ ಕಟ್ಟಿಸಿ ಮುಡಿ ಸಮರ್ಪಿಸಿದರು. ಕುಲದೇವತೆ ಚಾಮುಂಡೇಶ್ವರಿ ಮತ್ತು ನಂಜನಗೂಡು ಶ್ರೀಕಂಠೇಶ್ವರನಿಗೆ ನಡೆದುಕೊಳ್ಳುತ್ತಿದ್ದರು. ಶ್ರೀಕಂಠೇಶ್ವರಸ್ವಾಮಿಯ ರಥದ ಜೀರ್ಣೋದ್ಧಾರ ಗಂಗಾಧರೇಶ್ವರಸ್ವಾಮೀಯ ದೇವಸ್ಥಾನದಲ್ಲಿ ಗುಡಿ ಗೋಪುರ ನಿರ್ಮಾಣ ಪಂಚಲಿಂಗ ಪ್ರತಿಷ್ಠೆ ಇದಕ್ಕೆ ಸಾಕ್ಷಿ.

ನಂಜನಗೂಡಿನಲ್ಲಿ ಕೌಂಡಿನೀ ನದಿಗೆ ಅಡ್ಡಗಟ್ಟೆ ಹಾಕಿ ನರಸಾಂಬುಧಿ ತಟಾಕದ ನಿರ್ಮಾಣ. ಗಜ್ಜಿನನಹಳ್ಳಿಯ ಹೆಸರನ್ನು ಬದಲಿಸಿ ವಿಸ್ತರಿಸಿ ನರಸರಾಟ್ ಪುರ ಕೊಡುಗೆ. ರಂಗನಾಥನಿಗೆ ವೈಕುಂಠಮುಡಿಯ ಕೀರಿಟ, ಕರೀಘಟ್ಟದ ಶ್ರೀನಿವಾಸ ದೇವಾಲಯ ಜೀರ್ಣೋದ್ಧಾರ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.

Leave a Reply

Your email address will not be published.