Breaking News
ಸುಪ್ರೀಂ ಕೋರ್ಟ್ ನಲ್ಲಿದ್ದ ಕೇಸು ನಮ್ಮ ಪರವಾಗಿ ಬಂದಿದೆ-ಪ್ರಮೋದಾ ದೇವಿ ಒಡೆಯರ್

ಸುಪ್ರೀಂ ಕೋರ್ಟ್ ನಲ್ಲಿದ್ದ ಕೇಸು ನಮ್ಮ ಪರವಾಗಿ ಬಂದಿದೆ-ಪ್ರಮೋದಾ ದೇವಿ ಒಡೆಯರ್

ಸುಮಾರು 44 ವರ್ಷದಿಂದ ಸುದೀರ್ಘ ಹೋರಾಟಕ್ಕೆ ಜಯ ಲಭಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿದ್ದ ಕೇಸು ನಮ್ಮ ಪರವಾಗಿದೆ. ನಮ್ಮಿಂದ ಪಾವತಿ ಮಾಡಿಸಿಕೊಂಡಂತಹ ಹಣವನ್ನು ತೆರಿಗೆ ಇಲಾಖೆ ಬಡ್ಡಿ ಸಮೇತ ಹಿಂದಿರುಗಿಸಿದೆ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.

ಮೈಸೂರು ಅರಮನೆಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಸುಮಾರು 44 ವರ್ಷದಿಂದ ಸುದೀರ್ಘ ಕೋರ್ಟ್ ಕಟಕಟೆಯಲ್ಲಿದ್ದ ಪ್ರಕರಣಕ್ಕೆ ಮುಕ್ತಿ ದೊರಕಿದೆ. ಸುಪ್ರೀಂ ಕೋರ್ಟ್ ನಲ್ಲಿದ್ದ ಕೇಸು ನಮ್ಮ ಪರವಾಗಿ ಬಂದಿದೆ. ನಮ್ಮಿಂದ ಪಾವತಿ ಮಾಡಿಸಿಕೊಂಡಂತಹ ಹಣವನ್ನು ಬಡ್ಡಿ ಸಮೇತ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ವಾಪಸ್ಸು ಮಾಡಿದೆ. ಏನೇನು ಆಸ್ತಿ ಆದಾಯ ತೆರಿಗೆಗೆ ಅಟ್ಯಾಚ್ ಆಗಿತ್ತು. ಅದನ್ನು ಇವತ್ತು ಸಂಜೆ ಒಳಗಡೆ ಬಿಡುಗಡೆ ಮಾಡುತ್ತೇವೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ರಾಯಲ್ ಫ್ಯಾಮಿಲಿ ಆದಾಯ ತೆರಿಗೆ ಮುಕ್ತವಾಗಿದೆ ಎಂದರು. ಶ್ರೀ ಕಂಠದತ್ತ ನರಸಿಂಹ ರಾಜ ಒಡೆಯರ್ ನಂತರ ನಾನು ಕಾನೂನು ಹೋರಾಟ ನಡೆಸಿದ್ದೆ ಎಂದು ತಿಳಿಸಿದರು.ಇದೇ ವೇಳೆ ರಾಜಕೀಯ ಪ್ರವೇಶದ ಕುರಿತ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದರು. ಅರಮನೆಗೆ ಅಮಿತ್ ಶಾ ಆಗಮನ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ಕೇವಲ ಸೌಜನ್ಯಯುತ ಭೇಟಿ ಅವರು ರಾಜಕೀಯವಾಗಿ ನಮ್ಮ ಜೊತೆ ಚರ್ಚಿಸಿಲ್ಲ. ನಾನು ರಾಜಕೀಯಕ್ಕೆ ಬರ್ತಿಲ್ಲ. ನಾನು ಹಿಂದಿನಿಂದಲೂ ಹೇಳುತ್ತಿದ್ದೇನೆ ರಾಜಕೀಯಕ್ಕೆ ಬರೋ ಮಾತೇ ಇಲ್ಲ. ಅಮಿತ್ ಶಾ ಕೇವಲ ಅರಮನೆ ನೋಡೋದಕ್ಕೆ ಅಷ್ಟೇ ಬಂದಿದ್ದರು. ಈ ಹಿಂದೆ ಅಡ್ವಾಣಿ ಸೇರಿದಂತೆ ಇನ್ನಿತರ ನಾಯಕರು ಕೂಡ ಅರಮನೆಗೆ ಬಂದಿದ್ದರು. ಅವರು ಚುನಾವಣೆ ಸಮಯದಲ್ಲಿ ಬಂದಿದ್ದರಿಂದ ಮಾತ್ರ ಈ ರೀತಿಯ ಮಾತುಕತೆ ಹರಡಿದೆ ಅಷ್ಟೇ. ನಾನು ಜನರ ಪರವಾಗಿ ಕೆಲಸ ಮಾಡಲು ಬಯಸುತ್ತೇನೆ.ಯಾವುದೇ ಪಾರ್ಟಿ ಅಂತ ಹೋಗೋದಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ನಾವು ಕೆಲಸ ಮಾಡಬೇಕು ಎನ್ನುವುದು ನನ್ನ ಸ್ವಭಾವ. ಬೇರೆಯವರ ಸಹಾಯದಿಂದ ಯಾವುದೇ ಕೆಲಸ ಮಾಡಿಕೊಳ್ಳಲು ಇಷ್ಟ ಪಡೋದಿಲ್ಲ. ಆದ್ದರಿಂದ ನಾನು ರಾಜಕೀಯಕ್ಕೆ ಬರುವ ಬಗ್ಗೆ ಯೋಚನೆ ಮಾಡಿಲ್ಲ. ಯದುವೀರ್ ರಾಜಕೀಯಕ್ಕೆ ಬರೋದು ಅವರಿಗೆ ಬಿಟ್ಟ ವಿಚಾರ ಅದರಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಅರಮನೆ ಆಡಳಿತ ಸಿಬ್ಬಂದಿ ಲಕ್ಷ್ಮಿನಾರಾಯಣ ಮತ್ತಿತರರಿದ್ದರು

Leave a Reply

Your email address will not be published.