Breaking News

ದೊಡ್ಡದೇವರಾಜ ಒಡೆಯರ್-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೯

ದೊಡ್ಡದೇವರಾಜ ಒಡೆಯರ್-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೧೯

ಕಂಠೀರವ ನರಸರಾಜರ ಒಬ್ಬನೇ ಮಗ ಚಾಮರಾಜನ ಮರಣದಿಂದ ಬೆಟ್ಟದ ಚಾಮರಾಜ ಒಡೆಯರ್ ನೇರ ಸಂತತಿ ನಿಂತಿತು. ಸಹಜವಾಗಿಯೇ ಮುಪ್ಪಿನ ದೇವರಾಜ ಒಡೆಯರ್ ಮಕ್ಕಳಿಗೆ ಸಿಂಹಾಸನ ಹೋಗಬೇಕಾಯಿತು. ತೀರಿಕೊಳ್ಳುವ ಮೊದಲು ರಣಧೀರರು ಕಾರಗಳ್ಳಿ ಹಂಪರಾಜಯ್ಯ ಮುಂತಾದವರ ಸಮ್ಮುಖದಲ್ಲಿ ದೊಡ್ಡ ದೇವರಾಜ ಒಡೆಯರ್ ದತ್ತು ಸ್ವೀಕಾರ ಮಾಡಿದರು. 1582ರಲ್ಲಿ ಸಿಂಹಾಸನವನ್ನು ಏರಿದ ಇವರು ದೇವರಾಜೇಂದ್ರ, ದೇವಭೂಪಾಲ ದೇಪರಾಜ ಎಂದು ಕರೆಯಲಾಗಿದೆ. ಇವರ ಆಳ್ವಿಕೆ 14 ವರ್ಷ.

ರಾಜಕೀಯ ಸಾಧನೆ

ಚಾಮರಾಜ ಒಡೆಯರ್ ಕಾಲದಲ್ಲಿ ಆರಂಭವಾದ-ಇಕ್ಕೇರಿಯ ವೈಷಮ್ಯ ದೊಡ್ಡ ದೇವರಾಜರ ಕಾಲಕ್ಕೆ ಉಲ್ಬಣಿಸಿತು. ಇಕ್ಕೇರಿಯ ಶಿವಪ್ಪನಾಯಕ ಪಟ್ಟಣದ ಮೇಲೆ ಆಕ್ರಮಣ ಮಾಡಿದ ಘೋರವಾದ ಯುದ್ದ ನಡೆಯಿತು. ಇದರಲ್ಲಿ ಮೈಸೂರಿನ ರಾಜ ವಿಜಯಿಗಳಾದರು. ಪರಭಯಗಳಿಲ್ಲದ ದೇವರಾಜರು ಬಳಿಕ ವಿಜಯನಗರದ ಅರಸರ “ಧರಣಿ ವರಾಹ”, ಹಿಂದುರಾಯ ಸುರತ್ರಾಣ, ಮೂರು ಮನ್ನೆಯರ ಗಂಡ, ಚತುಃಸಮುದ್ರಾಧೀಶ್ವರ ಎಂಬ ಬಿರುದುಗಳನ್ನು ಧರಿಸಿದರು.

 

ಮುಂದುವರಿದ ಭಾಗ ನಾಳಿನ ಸಂಚಿಕೆಯಲ್ಲಿ….

Leave a Reply

Your email address will not be published.