Breaking News

ಇದೇ ತಿಂಗಳು 18,19 ಮತ್ತು 20 ಕ್ಕೆ ಸಿಇಟಿ

ಇದೇ ತಿಂಗಳು 18,19 ಮತ್ತು 20 ಕ್ಕೆ ಸಿಇಟಿ

ಕೇವಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಇದೇ ತಿಂಗಳು 18,19 ಮತ್ತು ಕ್ಕೆ ಸಿಇಟಿ ಪರೀಕ್ಷೆ ನಡೆಸಲು ಇಲಾಖೆ ಮುಂದಾಗಿದೆ ಎಂದು ಸಿಇಟಿ ನಿರ್ದೇಶಕಿ ವಿನೋದ ಪ್ರಿಯಾ ಹೇಳಿದ್ದಾರೆ. ಏ. 18 ರಂದು ಜೀವಶಾಸ್ತ್ರ, 19ಕ್ಕೆ ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ 20 ಕ್ಕೆ ಕನ್ನಡ ಭಾಷೆ ಕೇವಲ ಗಡಿನಾಡು ಮತ್ತು ಹೊರರಾಜ್ಯದ ಕನ್ನಡಿಗ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.

ರಾಜ್ಯಾದ್ಯಂತ ಒಟ್ಟು 430 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿ 86 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು ಈ ಬಾರಿ 1,98,639 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅದರಲ್ಲಿ 100071 ಪುರುಷ ಮತ್ತು 98568 ಮಹಿಳಾ ಅಭ್ಯರ್ಥಿಗಳ ಇದ್ದಾರೆ.

ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಹಾಯಕ ಆಯುಕ್ತರ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಒಟ್ಟು 430 ಪರೀಕ್ಷಾ ವೀಕ್ಷಕರು,860ವಿಶೇಷ ಜಾಗೃತಿ ದಳ ಸದಸ್ಯರು, 430ಪ್ರಶ್ನೆ ಪತ್ರಿಕೆ ಪಾಲಕರು,12440ಕೊಠಡಿ ಮೇಲ್ವಿಚಾರಕರ ಕಣ್ಗಾವಲಿನಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಮುಗಿದ ಎರಡು ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ನಿರ್ದೇಶಕಿ ವಿನೋದ ಪ್ರಿಯಾ ಹೇಳಿದ್ದಾರೆ.

Leave a Reply

Your email address will not be published.