Breaking News
ಅಭಿಮಾನಿಗಳ ಜೊತೆ “ದರ್ಶನ್”

ಅಭಿಮಾನಿಗಳ ಜೊತೆ “ದರ್ಶನ್”

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹಾಗೂ ಬ್ಯುಸಿ ಇರುವ ನಟ. ‘ಕುರುಕ್ಷೇತ್ರ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಾಗೂ ‘ಯಜಮಾನ’ ಚಿತ್ರ ಶೂಟಿಂಗ್ ಎರಡರಲ್ಲೂ ತೊಡಗಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ಇತ್ತೀಚಿಗಷ್ಟೆ ಬಿಡುವು ಮಾಡಿಕೊಂಡು ಅಭಿಮಾನಿಗಳ ಆಸೆ ಪೂರೈಸಲು ಮುಂದಾಗಿದ್ದರು.

ದರ್ಶನ್ ಹಾಗೂ ಸಹೋದರ ದಿನಕರ್ ಹೆಸರಿನಲ್ಲಿ ಅಭಿಮಾನಿಗಳೆಲ್ಲರೂ ಸೇರಿ ಪ್ರತಿವರ್ಷ ಕ್ರಿಕೆಟ್ ಮ್ಯಾಚ್ ನಡೆಸುತ್ತಾ ಬಂದಿದ್ದಾರೆ. ಈ ವರ್ಷವೂ ಎರಡು ದಿನಗಳು ಕ್ರಿಕೆಟ್ ಮ್ಯಾಚ್ ಆಡಿಸಲಾಯ್ತು. ರಾಜ್ಯದ ಆಯ್ದ ಜಿಲ್ಲೆಗಳಿಂದ ದರ್ಶನ್ ಅಭಿಮಾನಿಗಳು ಮೈದಾನಕ್ಕೆ ಇಳಿದು ಕ್ರಿಕೆಟ್ ಆಗಿದ್ರು.

ಎರಡು ದಿನಗಳ ಅಭಿಮಾನಿಗಳ ಜಾತ್ರೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಭಿಮಾನಿ ಆಗಿದ್ದರು. ಅದೆಷ್ಟೇ ಬ್ಯುಸಿ ಆಗಿದ್ದರೂ ಚಾಲೆಂಜಿಂಗ್ ಸ್ಟಾರ್ ಈ ಎರಡು ದಿನಗಳು ಮಾತ್ರ ಬಿಡುವು ಮಾಡಿಕೊಳ್ಳುತ್ತಾರೆ? ಅದ್ಯಾಕೆ ಅಂತೀರಾ ಮುಂದೆ ಓದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ಮೈದಾನಕ್ಕಿಳಿದು ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದಾರೆ. ಎರಡು ದಿನ ನಡೆದ ‘ಡಿಪಿಎಲ್’ ಕ್ರಿಕೆಟ್ ಮ್ಯಾಚ್ ನಲ್ಲಿ ಅಭಿಮಾನಿಗಳ ಜೊತೆ ಸೇರೆ ಆಟವಾಡಿದ್ದಾರೆ.

 

ದರ್ಶನ್ ಸದ್ಯ ಬಿಡುವಿಲ್ಲದಂತೆ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ವರ್ಷಪೂರ್ತಿ ದರ್ಶನ್ ಅವರಿಗಾಗಿ ಚಡಪಡಿಸುವ ಅಭಿಮಾನಿಗಳಿಗಾಗಿ ಎರಡು ದಿನ ಸಮಯ ನೀಡಿದ್ದಾರೆ.

 

ಡಿಪಿಎಲ್ ನಲ್ಲಿ ದರ್ಶನ್ ಮಾತ್ರವಲ್ಲದೆ ದಿನಕರ್ ತೂಗುದೀಪ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್ ಹೀಗೆ ಸಾಕಷ್ಟು ಸ್ಟಾರ್ ಗಳು ಅಭಿಮಾನಿಗಳ ಜೊತೆ ಕ್ರಿಕೆಟ್ ಆಡಿದ್ದಾರೆ.

 

 

Leave a Reply

Your email address will not be published.