Breaking News
5ನೇ ವಯಸ್ಸಿನಲ್ಲಿಯೇ ಈ ನಟಿ ಮೇಲೆ ನಡೆದಿತ್ತಂತೆ ಲೈಂಗಿಕ ಕಿರುಕುಳ

5ನೇ ವಯಸ್ಸಿನಲ್ಲಿಯೇ ಈ ನಟಿ ಮೇಲೆ ನಡೆದಿತ್ತಂತೆ ಲೈಂಗಿಕ ಕಿರುಕುಳ

ಉನ್ನಾವ್ ಹಾಗೂ ಕತುವಾ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಚರ್ಚೆಯಾಗ್ತಿದೆ. ಗಣ್ಯರು ಸೇರಿದಂತೆ ಸಾಮಾನ್ಯ ಜನರು ಅತ್ಯಾಚಾರ ಪ್ರಕರಣದ ವಿರುದ್ಧ ದನಿ ಎತ್ತಿದ್ದಾರೆ. ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ತಮಿಳು ನಟಿ ನಿವೇತಾ ಪೇತುರಾಜ್ ತಮ್ಮ ಜೀವನದಲ್ಲಾದ ಘಟನೆಯೊಂದನ್ನು ಎಲ್ಲರ ಮುಂದಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಾಕಿರುವ ನಟಿ ಬಾಲ್ಯದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದೆ ಎಂದಿದ್ದಾರೆ. 5 ವರ್ಷದಲ್ಲಿರುವಾಗಲೇ ನನ್ನ ಮೇಲೆ ದುಷ್ಕೃತ್ಯ ನಡೆದಿತ್ತು ಎಂದು ನಟಿ ಹೇಳಿದ್ದಾಳೆ. ಈ ವಿಡಿಯೋ ನೋಡುತ್ತಿರುವ ಕೆಲ ಪುರುಷರು ಹಾಗೂ ಮಹಿಳೆಯರು ಕೂಡ ಲೈಂಗಿಕ ಕಿರುಕುಳಕ್ಕೊಳಗಾಗಿರಬಹುದು. ನಾನು ಕೂಡ 5 ನೇ ವರ್ಷದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ. ಆಗ್ಲೇ ನಾನು ತಂದೆ-ತಾಯಿಗೆ ಹೇಳಬೇಕಿತ್ತು. ಆದ್ರೆ ನನಗೆ ಅದೇನು ಎಂಬುದೇ ತಿಳಿದಿರಲಿಲ್ಲ ಎಂದಿದ್ದಾರೆ.

ಎಲ್ಲ ಪಾಲಕರು ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಹೇಳಬೇಕು ಎಂದು ನಟಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪಾಲಕರು ಹಿಂಜರಿಯಬಾರದು. ಮಕ್ಕಳಿಗೆ 2 ವರ್ಷವಾಗ್ತಿದ್ದಂತೆ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಹೇಳಬೇಕು. ಶಾಲೆಯಲ್ಲಿ, ಟ್ಯೂಷನ್ ನಲ್ಲಿ, ಪಕ್ಕದ ಮನೆಯಲ್ಲಿ ಏನಾಗುತ್ತದೆ ಎಂಬುದು ನಮಗೆ ತಿಳಿಯುವುದಿಲ್ಲ. ಪಾಲಕರು ಹೆಚ್ಚು ಜವಾಬ್ದಾರರಾಗಿ ಮಕ್ಕಳ ಬಗ್ಗೆ ಎಲ್ಲ ವಿಚಾರವನ್ನೂ ತಿಳಿದಿರಬೇಕು ಎಂದಿದ್ದಾರೆ.

ಇದ್ರಲ್ಲಿ ಸಮಾಜ ಕೂಡ ಬಹುಮುಖ್ಯ ಪಾತ್ರವಹಿಸುತ್ತದೆ. ಊರಿನಲ್ಲೇ ಪುರುಷರ ಒಂದು ಗುಂಪು ರಾತ್ರಿ-ಹಗಲು ರಸ್ತೆ ಆಸುಪಾಸು ಓಡಾಡುತ್ತಿದ್ದರೆ ಮಹಿಳೆಯರ ಮೇಲಾಗುವ ಅತ್ಯಾಚಾರವನ್ನು ತಡೆಯಬಹುದು ಎನ್ನುತ್ತಾರೆ.

Leave a Reply

Your email address will not be published.