Breaking News

ಚಾಮುಂಡಿ ಬೆಟ್ಟದ ನಂದಿ ಸ್ಥಾಪಿಸಿದವರು ಯಾರು ಗೊತ್ತೆ?-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೨೦

ಚಾಮುಂಡಿ ಬೆಟ್ಟದ ನಂದಿ ಸ್ಥಾಪಿಸಿದವರು ಯಾರು ಗೊತ್ತೆ?-ಮೈಸೂರಿನ ಮಹಾರಾಜರುಗಳ ವರ್ಣಮಯ ಇತಿಹಾಸ ಭಾಗ-೨೦

ಚಾಮುಂಡಿ ಬೆಟ್ಟಕ್ಕೆ ಸಾಗುವ ಮೆಟ್ಟಿಲಗಳ ಮಧ್ಯ ಭಾಗದಲ್ಲಿ ಮಂಡಿಯೂರಿ ಕುಳಿತ ಬೃಹತ್ ಗಾತ್ರದ ನಂದಿ ವಿಗ್ರಹಕ್ಕೆ 350 ವರ್ಷಗಳ ಇತಿಹಾಸ ಇದೆ. ಅದನ್ನು ಕೆತ್ತಿಸಿ ಪ್ರತಿಷ್ಠಾಪಿಸಿದವರು ಯಾರೆಂದು ತಿಳಿಯಬೇಕೆ. ದೊಡ್ಡ ದೇವರಾಜರು ಆಳ್ವಿಕೆಯಲ್ಲಿ ಮೈಸೂರು ನಗರಕ್ಕೆ ಅವಿಸ್ಮರಣೀಯ ಕಾಣಿಕೆಗಳನ್ನು ನೀಡಿದ್ದಾರೆ. ಮೈಸೂರಿನ ಮುಕುಟ ಚಾಮುಂಡಿಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹಾಕಿಸಿದವರು ಇವರೇ. 1659ರಲ್ಲಿ ಅಲ್ಲದೆ ಬೆಟ್ಟದ 700 ಮೆಟ್ಟಿಲ ಮಧ್ಯದಲ್ಲಿರುವ ಬೃಹದಾಕಾರವಾದ ನಂದಿಯನ್ನು ಕಡೆಸಿ ಅವರು ಪ್ರತಿಷ್ಠಾಪಿಸಿದರು.ನಂದಿ ವಿಗ್ರಹ 16 ಅಡಿ ಎತ್ತರ ಹಾಗೂ 24 ಅಡಿ ಅಗಲವಿದೆ. ಇದು ದೇಶದ ಮೂರನೇ ಅತಿ ಎತ್ತರದ ನಂದಿ ವಿಗ್ರಹವಾಗಿದೆ.
ಗಂಟೆಸರ, ಗವುಸುಗಳಿಂದ ಅಲಂಕೃತವಾಗಿ ಮೈದುಂಬಿಕೊಂಡಿರುವ ತಲೆಯೆತ್ತಿ ಕುಳಿತಿರುವ ಈ ಬೆಟ್ಟದ ಬಸವನಿಂದ ದೇವರಾಜರ ಹೆಸರು ಸ್ಮರಣೀಯವಾಗಿದೆ.
ಕಳೆದ ನಾಲ್ಕೈದು ದಶಕಗಳಿಂದ ಜನತೆ ಕಪ್ಪು ನಂದಿಯನ್ನು ನೋಡಿದ್ದರು. ಈ ವಿಗ್ರಹದ ಮೂಲ ಬಣ್ಣ ಬಿಳಿ. ಆದರೆ ಎಣ್ಣೆ ಮಜ್ಜನ ಮಾಡಿಸಿ, ಈ ವಿಗ್ರಹ ಮೂಲ ಬಣ್ಣವನ್ನು ಕಳೆದುಕೊಂಡು ಕಪ್ಪಾಗಿತ್ತು. ಇದೀಗ ಧಾರ್ಮಿಕ ದತ್ತಿ ಇಲಾಖೆಯವರು ನಂದಿ ವಿಗ್ರಹವನ್ನು ರಾಸಾಯನಿಕದಿಂದ ಸ್ವಚ್ಛಗೊಳಿಸಿರುವುದರಿಂದ ನಂದಿ ವಿಗ್ರಹ ಸಂಪೂರ್ಣ ಬೆಳ್ಳಗಾಗಿದೆ. ಅಲ್ಲದೆ ಮೈಸೂರಿನ ದೊಡ್ಡಕೆರೆ ಎಂದು ಕರೆಸಿಕೊಳ್ಳುವ ದೇವಾಂಬುದಿ ಕೆರೆಯನ್ನು ನಿರ್ಮಿಸಿದವರೂ ಇವರೆ. ದಾನ ಧರ್ಮಗಳಿಂದ ಪ್ರಖ್ಯಾತ ಹೊಂದಿದ್ದ ಇವರು 1673 ರಲ್ಲಿ ನಿಧನರಾದರು.

Leave a Reply

Your email address will not be published.