Breaking News

ಒಡವೆಯನ್ನೆ ಅಡಮಾನಕ್ಕೆ ನೀಡಿದ ಮೈಸೂರು ಮಹಾರಾಣಿ ?

ಒಡವೆಯನ್ನೆ ಅಡಮಾನಕ್ಕೆ ನೀಡಿದ ಮೈಸೂರು ಮಹಾರಾಣಿ ?

ಕೆಆರ್‌ಎಸ್ ಕಟ್ಟುವಾಗ ಹಣದ ಕೊರತೆಯಾದಾಗ ಮಹಾರಾಣಿ ದೊಡ್ಡಮ್ಮಣ್ಣಿ ಅವರು ತಮ್ಮ ಚಿನ್ನದ ಒಡವೆಗಳನ್ನೆ ಅಡಮಾನಕ್ಕೆ ನೀಡಿದರು. ಇದರಿಂದ ಕೆಆರ್‌ಎಸ್ ಜಲಾಶಯ ನಿರ್ಮಾಣವಾಯಿತು. ಸಾವಿರಾರು ಜನರಿಗೆ ಜೀವ ಜಲ ಹಾಗೂ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗಿದೆ. ಈ ಭಾಗದ ಜನರು ಕೆಆರ್‌ಆಸ್ ನಿರ್ಮಾಣದ ಯೋಜನೆ ಸಿದ್ಧಪಡಿಸಿದ ವಿಶ್ವೇಶ್ವರಯ್ಯ ಅವರೊಂದಿಗೆ ಅಣೆಕಟ್ಟು ನಿರ್ಮಾಣಕ್ಕೆ ತನ್ನ ಒಡವೆಗಳನ್ನು ನೀಡಿದ ದೊಡ್ಡಮ್ಮಣ್ಣಿ ಅವರ ಕೊಡುಗೆಯನ್ನು ಸ್ಮರಿಸುತ್ತಾರೆ.

ಆಸ್ಪತ್ರೆ ನಿರ್ಮಾಣಕ್ಕೆ ಪ್ರೇರಣೆ

ಚಾಮರಾಜ ಒಡೆಯರ್ ಅವರ ಮಗಳು ಕೃಷ್ಣರಾಜಮ್ಮಣ್ಣಿ ಹಾಗೂ ಅವರ ನಾಲ್ವರು ಮಕ್ಕಳು ಪ್ಲೇಗ್ ಮಹಾಮಾರಿಗೆ ಜೀವ ಕಳೆದುಕೊಳ್ಳುತ್ತಾರೆ. ಇದರಿಂದ ದುಃಖತಪ್ತರಾದ ಸಹೋದರರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ಕೆಆರ್‌ಎಸ್ ರಸ್ತೆಯ ಬೃಂದಾವನ ಬಡಾವಣೆ ಬಳಿ ಕೃಷ್ಣರಾಜಮ್ಮಣ್ಣಿ ಅವರ ಹೆಸರಿನಲ್ಲೆ ಪಿಕೆಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ನಿರ್ಮಾಣ ಮಾಡುತ್ತಾರೆ. ತನ್ಮೂಲಕ ಆ ರೋಗಕ್ಕೆ ಚಿಕಿತ್ಸೆ ದೊರೆತು ಇತರರು ಈ ಕಾಯಿಲೆಯಿಂದ ಬಳಲಿ ಪ್ರಾಣ ಬಿಡುವುದು ದೂರವಾಗುತ್ತದೆ. ಈ ಕಾರ್ಯಕ್ಕೆ ಸಂಸ್ಥಾನದ ಮಹಾರಾಣಿ ಅವರೇ ಪ್ರೇರಣೆಯಾಗಿದ್ದು ವಿಶೇಷ.
ಮೈಸೂರು ಸಂಸ್ಥಾನದ ಇತಿಹಾಸವನ್ನು ಗಮನಿಸಿದಾಗ ಮಹಾರಾಣಿಯರು ಜನಸಾಮಾನ್ಯರಿಗಾಗಿ ತಮ್ಮದೆ ಕೊಡುಗೆ ನೀಡಿರುವುದು ತಿಳಿಯುತ್ತದೆ.

 

Leave a Reply

Your email address will not be published.